ಬಳಂಜ: ಆಟಿಡೊಂಜಿ ಐತರಾ ಕಾರ್ಯಕ್ರಮ

 

 

ಬಳೆಂಜ: ಬೃಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ (ರಿ), ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ, ಬಳಂಜ , ನಾಲ್ಕೂರು – ತೆಂಕಕಾರಂದೂರು ಇವುಗಳ ಆಶ್ರಯದಲ್ಲಿ ಬಳಂಜ ಬ್ರಹಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಆಟಿಡೊಂಜಿ ಐತರ ಕಾರ್ಯಕ್ರಮ ನಡೆಯಿತು.
ಸಂಫದ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಂಜ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾಧ್ಯಕ್ಷರು ಲಲಿತ ಬಿ.ಅಮೀನ್ ಇವರಿಂದ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಶ್ರುತಿ ಅಮೀನ್ ಆಟಿಯ ಕುರಿತು ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ವಿವಿಧ ಮನೋರಂಜ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ನಿರ್ದೇಶಕ ರಂಜಿತ್ ಎಚ್.ಡಿ, ಸಂಘದ ಗೌರವ ಮಾರ್ಗದರ್ಶಕ ಕೆ.ವಸಂತ್ ಸಾಲ್ಯಾನ್, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ .ಪಿ.ಕೋಟ್ಯಾನ್ , ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶಾಲ ಜಗದೀಶ್ ನಿರೂಪಿಸಿ. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಪುಷ್ಪಾ ಗಿರೀಶ್ ಸ್ವಾಗತಿಸಿ, ಶ್ರುತಿ ರಂಜಿತ್ ವಂದನಾರ್ಪಣೆ ನೆರವೇರಿಸಿದರು.
ಮಹಿಳೆಯರು ತಯಾರಿಸಿ ತಂದ ವಿವಿಧ ಸಂಪ್ರಾಯಿಕ ಖಾದ್ಯಗಳನ್ನು ಎಲ್ಲರೂ ಸವಿದರು.

 

error: Content is protected !!