ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್ಸ್ (ಕನಸಿನ ಮನೆ) ಮಾಲಕ ಮೋಹನ್ ಕುಮಾರ್ ರವರಿಗೆ ಬೆಂಗಳೂರಿನಲ್ಲಿ ಅಗಸ್ಟ್ 6 ರಂದು ವಿಜಯವಾಣಿ ಮತ್ತು ದ್ವಿಗ್ವಿಜಯ ಚಾನಲ್ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ 42 ಮಂದಿಗೆ ವಿಜಯ ರತ್ನ-2022 ಪ್ರಶಸ್ತಿ ನೀಡಲಾಗಿದ್ದು ಇದರಲ್ಲಿ ಒಬ್ಬರಾದ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ರವರಿಗೆ ವಿಜಯ ರತ್ನ -2022 ಪ್ರಶಸ್ತಿ ಲಭಿಸಿದೆ. ಉಜಿರೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್(ಕನಸಿನಮನೆ) ಕಚೇರಿಗೆ ತೆರಳಿ ಮೋಹನ್ ಕುಮಾರ್ ಅವರನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು.
ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು, ಉಜಿರೆ ಪ್ರಗತಿ ಮಹಿಳಾ ಮಂಡಲದ ಪದಾಧಿಕಾರಿಗಳು,
ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಪೂವಪ್ಪ ಗೌಡ ಮತ್ತು ಪದಾಧಿಕಾರಿಗಳು, ಕೈಗಾರಿಕಾ ಸಂಘದ ಪದಾಧಿಕಾರಿಗಳು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ.ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಬರಮೇಲು, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ರಾಜ್ಯ ಸಭಾ ಸದಸ್ಯರ ಆಪ್ತಕಾರ್ಯದರ್ಶಿ ಕೆ.ಎನ್.ಜನಾರ್ದನ್ ,ವಿಷ್ಣು ಸಮಾಜದ ಪದಾಧಿಕಾರಿಗಳು, ಶ್ರೀ ರಾಮ್ ಭಜನಾ ಮಂದಿರದ ಪದಾಧಿಕಾರಿಗಳು, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಮ್.ಶ್ರೀಧರ್ ಕಲ್ಮಂಜ, ಭಾರತ್ ಐರನ್ ವಾರ್ಕ್ಸ್ ಮಾಲೀಕ ಪಾಂಡುರಂಗ ಬಾಳಿಗ, ಉಜಿರೆ ಉದ್ಯಮಿ ರವಿ ಚಕ್ಕಿತ್ತಾಯ,
ರೋಟರಿ ಕ್ಲಬ್ ಸದಸ್ಯರಾದ ಶ್ರೀಧರ್.ಕೆ.ವಿ ಮತ್ತು ಅಬುಬಕ್ಕರ್, ಉದ್ಯಮಿ ಮೋಹನ್ ಶೆಟ್ಟಿಗಾರ್, ಅಮೃತ್ ಟೆಕ್ಸ್ ಟೈಲ್ ಮಾಲೀಕ ಪ್ರಶಾಂತ್ ಜೈನ್ , ಮಹಾವೀರ ಗ್ರೂಪ್ಸ್ ಮಾಲೀಕ ಪ್ರಭಾಕರ್ ಹೆಗ್ಡೆ, ರಮ್ಯಾ ಒನ್ ಗ್ರಾಂ ಗೋಲ್ಡ್ ಮಾಲೀಕ ಪ್ರಸಾದ್ , ಸಿಂಧೂ ಇಲೆಕ್ಟ್ರಿಕಲ್ ಮಾಲೀಕ ಜನಾರ್ದನ್,ಖಾಸಗಿ ಬಸ್ ಏಜೆಂಟ್ ಶ್ರೀನಿವಾಸ್ ಧರ್ಮಸ್ಥಳ, ಕೇಶವ ಭಟ್ ಅತ್ತಾಜೆ, ಉದ್ಯಮಿ ರಾಮಚಂದ್ರ ಶೆಟ್ಟಿ,
ದೇವರಾಜ್ ಭಂಡಾರಿ, ಶಿವಶಂಕರ್ ಕುಡುವ, ಪ್ರಭಾಕರ್ ಶೆಣೈ, ಇಂಡಿಯಾನ್ ಡ್ರೆಸಸ್ಸ್ ಮಾಲೀಕ ಲಕ್ಷ್ಮಣ್ ಗೌಡ, ಗಣೇಶ್ ಗ್ಲಾಸ್ & ಪ್ಲೈವುಡ್ ಮಾಲೀಕ ಕೊದಂಡರಾಮ, ದಿಶಾ ಬೇಕರಿ ಮಾಲೀಕ ದಿನೇಶ್, ದಿಶಾ ಹೊಟೇಲ್ ಮಾಲೀಕ ಅರುಣ್ ಕುಮಾರ್, ಹೊಟೇಲ್ ಕಾಮಧೇನು ಮಾಲೀಕ ಮಾಧವ ಹೊಳ್ಳ ಮತ್ತಿತ್ತರರು ಉಪಸ್ಥಿತಿ ಇದ್ದರು.