ಪಿಲಿಗೂಡು: ಹಳೆವಿದ್ಯಾರ್ಥಿಗಳಿಂದ ಶ್ರಮದಾನ

 

 

ಪಿಲಿಗೂಡು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಶನಿವಾರ ಶ್ರಮದಾನ‌ ನಡೆಯಿತು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಸ್ತೆ ಬದಿ ಹಾಗೂ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಹೂವಿನ ಗಿಡಗಳನ್ನು ನೆಡಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಶಾಲೆಯ ಮುಖ್ಯಶಿಕ್ಷಕ ವೀರೇಂದ್ರ ಪಾಟೀಲ್ ನಾಯಕ್ ಎಂ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್ವರ ಜಿ., ಉಪಾಧ್ಯಕ್ಷ ಲಕ್ಷ್ಮಣ್, ಸಂಘದ ಉಮೇಶ್, ಇಸುಬು, ನಾರಾಯಣ, ಯಾದವ ಜಿ., ಯೋಗೀಶ್ ನಡುಗುಡ್ಡೆ, ಹರ್ಷಿತ್ ಪಿಂಡಿವನ, ಶಾಲಾ ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಇದ್ದರು.

error: Content is protected !!