ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ: ನಾಗ ದೇವರಿಗೆ ಕ್ಷೀರಾಭಿಷೇಕ ಮತ್ತು ವಿಶೇಷ ಪೂಜೆ:

 

 

ಚಾರ್ಮಾಡಿ:  ನಾಗರ ಪಂಚಮಿ ಹಬ್ಬವನ್ನು ನಾಡಿನಾದ್ಯಂತ ಶ್ರದ್ಧಾಭಕ್ತಿಯಿಂದ ವಿಶೇಷ ರೀತಿಯಲ್ಲಿ ಇಂದು ಆಚರಿಸಲ್ಪಡುತಿದ್ದಾರೆ.ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಇಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಾಗರ ಪಂಚಮಿಯ ಅಂಗವಾಗಿ ನಾಗ ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು.
ಈ ಸಂಧರ್ಭ ದೇವಸ್ಥಾನ ಆಡಳಿತ ಮೊಕ್ತೇಸರರಾದ ಪ್ರಕಾಶ್ ಹೊಸಮಠ, ರವಿ ಪೂಜಾರಿ, ಕೇಶವ ಗೌಡ, ಗಣೇಶ್ ಕೋಟ್ಯಾನ್, ಶ್ರೀನಿವಾಸ ಕುಲಾಲ್, ಜಗದೀಶ್ ಮುಗುಳಿದಡ್ಕ, ಶಾರದ ಅಣಿಯೂರು, ಶೈಲಜಾ ಹೊಸಮಠ ಹಾಗೂ ಗ್ರಾಮದ ಭಕ್ತಬಾಂಧವರು ಉಪಸ್ಥಿತರಿದ್ದರು.

error: Content is protected !!