ಸುರತ್ಕಲ್ ಪಾಜಿಲ್ ಹತ್ಯೆ ಪ್ರಕರಣ: 6 ಮಂದಿಯನ್ನು ಬಂಧಿಸಿದ ಪೊಲೀಸರು:

 

 

ಮಂಗಳೂರು: ಸುರತ್ಕಲ್​ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಗುರುವಾರ ಸುರತ್ಕಲ್​ನಲ್ಲಿ ಅಂಗಡಿ ಮುಂದೆ ನಿಂತಿದ್ದ ಫಾಜಿಲ್​ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಕಾರನ್ನು ದುಷ್ಕರ್ಮಿಗಳಿಗೆ ನೀಡಿದ್ದ ಅಜಿತ್ ಕ್ರಾಸ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಉಡುಪಿಯಲ್ಲಿ ಹತ್ಯೆಗೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ಸಂಬಂಧ ಇಂದು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಸಂಬಂಧ ನಿನ್ನೆ ಮಾಹಿತಿ ನೀಡಿದ್ದ ಮಂಗಳೂರು ಪೊಲೀಸ್​ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ 51 ಮಂದಿಯನ್ನು ವಿಚಾರಣೆ ನಡೆಸಿ, ಪ್ರಕರಣದ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದರು.

ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಜಿಪಿ – ಐಜಿಪಿ ಪ್ರವೀಣ್​ ಸೂದ್​, ಮಂಗಳೂರಿಗೆ ಭೇಟಿ ನೀಡಿ ತನಿಖೆಗೆ ಮತ್ತಷ್ಟು ಚುರುಕುಗೊಳಿಸಿದ್ದರು. ತಪ್ಪಿತಸ್ಥರು ಯಾರೇ ಇರಲಿ ಬಿಡುವುದಿಲ್ಲ ಎಂದು ಗುಡುಗಿದ್ದರು.

error: Content is protected !!