ಡಾಕ್ಟರೇಟ್ ಪಡೆದ ಬಾಲ ಪ್ರತಿಭೆ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಶಾಸಕ ಹರೀಶ್ ಪೂಂಜ: ಐಎಎಸ್ ಕನಸಿನ ಶೌರ್ಯಳಿಗೆ ಆರ್ಥಿಕ ಬೆಂಬಲದ ಭರವಸೆ :

 

ಬೆಳ್ತಂಗಡಿ: ಡಾಕ್ಟರೇಟ್ ಪದವಿ ಪಡೆದ ನಾರ್ಯದ ಬಾಲ ಪ್ರತಿಭೆ ಶೌರ್ಯ ಎಸ್.ವಿ.‌ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಅಭಿನಂದಿಸಿದರು.‌ಕಿರಿಯ ವಯಸ್ಸಿನಲ್ಲೇ ಅಸಾಧಾರಣ ಸಾಧನೆ ತೋರಿದ ಬಾಲ ಪ್ರತಿಭೆ ಧರ್ಮಸ್ಥಳ ಕನ್ಯಾಡಿ 2 ಗ್ರಾಮದ ಸರಕಾರಿ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಶೌರ್ಯ ಎಸ್. ವಿ. ಅವರಿಗೆ ತಮಿಳುನಾಡಿನ ಏಷ್ಯಾ ವೇದಿಕ್ ಕಲ್ಚರ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. 12 ವರ್ಷದ ಶೌರ್ಯ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

 

 

 

ಎಲ್ಲಾ ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ಭಾಗವಹಿಸಿ 42 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿರುವ ಶೌರ್ಯ ತಮಿಳುನಾಡಿನಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.ಮೂಲತಃ ಚಿಕ್ಕಮಗಳೂರಿನ ವಲೇಕರೇಟಿಯಲ್ಲಿ ಜನಿಸಿದ ಡಾ. ಶೌರ್ಯ ಸುರೇಶ್ ಗೌಡ, ಕುಸುಮಾ ದಂಪತಿ ಪುತ್ರಿ ಆಕೆ ಒಂದನೇ ತರಗತಿಯಲ್ಲಿರುವಾಗಲೇ ಭಗವದ್ಗೀತೆ ಅಭ್ಯಾಸ ಮಾಡಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ 3 ನೇ ಸ್ಥಾನ ಪಡೆದಿದ್ದರು.7 ನೇ ತರಗತಿಯಲ್ಲಿರುವಾಗ ರಾಷ್ಟ್ರ ಮಟ್ಟದ ಗಾಂಧೀಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಗಿನ್ನಿಸ್ ವರ್ಲ್ಡ್ ರೆಕಾರ್ಡ್ ,ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಲ್ಡ್ ರೆಕಾರ್ಡ್ ಗಳಲ್ಲಿ ಹೆಸರು ದಾಖಲಿಸಿ ಇಡೀ ತಾಲೂಕಿಗೆ ಹೆಮ್ಮೆ ತಂದುಕೊಟ್ಟಿದ್ದಾರೆ.‌ಅಪ್ರತಿಮ ಸಾಧನೆ ತೋರಿದ ಬಾಲಕಿಯ ಮನೆಗೆ ಆ 02 ರಂದು ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮನೆಯ ಸ್ಥಿತಿ ಹಾಗೂ ತಮ್ಮ ಬಡತನದ ಬಗ್ಗೆ ಶಾಸಕರಲ್ಲಿ ಶೌರ್ಯ ತಾಯಿ ಕುಸಮಾವತಿ ವಿವರಿಸಿ ಹಲವು ಕಡೆಗಳಿಂದ ಸನ್ಮಾನಕ್ಕೆ ಮಗಳನ್ನು ಕರೆಯುತಿದ್ದಾರೆ ಅದರೆ ಹೋಗಲು ಹಣ ಇಲ್ಲದಂತಾಗಿದೆ ಎಂದು ತನ್ನ ಅಸಾಹಾಯಕತೆಯನ್ನು ತೋಡಿಕೊಂಡಾಗ ಅವರಿಗೆ ಶಾಸಕರು ಧೈರ್ಯ ತುಂಬಿದರಲ್ಲದೇ ಮಕ್ಕಳ ಮುಂದಿನ ವಿಧ್ಯಾಭ್ಯಾಸದ ಬಗ್ಗೆ ಆರ್ಥಿಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಐಎಎಸ್ ಕಲಿಯುವ ಇಂಗಿತವನ್ನು ಶೌರ್ಯ ಶಾಸಕರಲ್ಲಿ ವ್ಯಕ್ತಪಡಿಸಿದಾಗ ಅದಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರಲ್ಲದೆ ಆರ್ಥಿಕ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಕರುಣಾಕರ ಗೌಡ ಭೋಜಾರ, ನೀಲಕಂಠ ಶೆಟ್ಟಿ ನಿಶಾಂತ್ ನಾರ್ಯ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!