ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ: ಕೊಕ್ಕಡದಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಫರ್ಧೆ:

 

 

 

 

ಬೆಳ್ತಂಗಡಿ: ಕೊಕ್ಕಡದ ಸಂತ ಫ್ರಾನ್ಸಿಸರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ಜುಲೈ 22 ರಂದು ನಡೆಯಿತು. ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು
ಭಾಗವಹಿಸಿ ತಾಲೂಕು ಮಟ್ಟದಲ್ಲಿ ಸಾಧನೆಗೈದಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಶಮಂತ್ (6ನೇ) ಪ್ರಥಮ ಸ್ಥಾನ, ಮಾನ್ವಿ ಪ್ರವೀಣ್ ಕುಮಾರ್ (6ನೇ)ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಜೈನುಲ್ ಆಬಿದ್ (10ನೇ) ದ್ವಿತೀಯ ಸ್ಥಾನ, ಪ್ರದ್ಯೋತ್ ರಾವ್( 7ನೇ) ತೃತೀಯ ಸ್ಥಾನ, ಮಹಮ್ಮದ್ ಶಾಮಿಲ್ (10ನೇ) ತೃತೀಯ ಸ್ಥಾನ, ರಾಯಿಝ್ ರಜಾಕ್ (9ನೇ) ತೃತೀಯ ಸ್ಥಾನ ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ. ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

error: Content is protected !!