ಬೆಳ್ತಂಗಡಿ: ಸಂಘಟನೆ ಬಲಿಷ್ಠವಾಗಲು ಸದಸ್ಯರ ಸಹಕಾರ ಅಗತ್ಯ. ಬೆಳ್ತಂಗಡಿ ವಲಯದ ಸಮವಸ್ತ್ರ ಶಿಸ್ತು ಬದ್ಧ ಕಾರ್ಯನಿರ್ವಹಣೆಯನ್ನು ಸೂಚಿಸುತ್ತದೆ ಎಂದು ಎಂದು ಎಸ್.ಕೆ.ಪಿ.ಎ. ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾಳ ಹೇಳಿದರು.
ಅವರು ಗುರುವಾಯಾನಕೆರೆ ‘ಛಾಯಾ ಭವನ’ದಲ್ಲಿ ಸೋಮವಾರ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 20ನೇ ವರ್ಷದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಡಾಕ್ಟರೇಟ್ ಪದವಿ ಪಡೆದ ವಲಯದ ಸದಸ್ಯ ಚಂದ್ರಹಾಸ ಚಾರ್ಮಾಡಿ ಅವರನ್ನು ಸನ್ಮಾನಿಸಲಾಯಿತು.
ಸಂಘಕ್ಕೆ ಸೇರ್ಪಡೆಗೊಂಡ ಸದಸ್ಯರು, ಗೃಹ ನಿರ್ಮಾಣ ಮಾಡಿದ, ದಾಂಪತ್ಯ ಜೀವನ ಆರಂಭಿಸಿದ ಸದಸ್ಯರನ್ನು ಗುರುತಿಸಲಾಯಿತು.
ಚರ್ಚಾ ಕೂಟದಲ್ಲಿ ಜಿಲ್ಲಾ ಸಂಘಟನೆಯಲ್ಲಿ ಇರುವ ವ್ಯಕ್ತಿ ರಾಜಕೀಯ ಲಾಭಕ್ಕಾಗಿ ಜನಪ್ರತಿನಿಧಿಯನ್ನು
ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ ವಿಚಾರದ ಕುರಿತು ವಲಯದ ಸದಸ್ಯರಾದ ಉಮೇಶ್ ಕುಲಾಲ್, ಸುರೇಶ್ ಕೌಡಂಗೆ ಆಕ್ರೋಶ ವ್ಯಕ್ತ ಪಡಿಸಿದರು.
ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷ ಅಶೋಕ್ ಆಚಾರ್ಯ ವಹಿಸಿದ್ದರು. ಎಸ್.ಕೆ.ಪಿ.ಎ. ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್, ಜಿಲ್ಲಾ ಸಮಿತಿ ಅಧ್ಯಕ್ಷ ನಿತಿನ್ ಬೆಳುವಾಯಿ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಲೋಕೇಶ್ ಸುಬ್ರಮಣ್ಯ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಉಮೇಶ್, ಮನು ಮದ್ದಡ್ಕ, ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ವಲಯದ ಗೌರವಾಧ್ಯಕ್ಷ ಸುಬ್ರಮಣ್ಯ ಕೆ.ಜೆ., ಉಪಾಧ್ಯಕ್ಷ ಪ್ರವೀಣ್ ಕೆದ್ದು, ಸಿಲ್ವಿಯ ಬೆಳ್ತಂಗಡಿ, ಮಾಜಿ ಅಧ್ಯಕ್ಷರು, ಗೌರವ ಸಲಹೆಗಾರರು, ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು.
ವಲಯದ ಪ್ರಧಾನ ಕಾರ್ಯದರ್ಶಿ ಹರೀಶ್ ಬಳ್ಳಮಂಜ ವರದಿ ಮಂಡಿಸಿ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ ಲೆಕ್ಕಪತ್ರ ಮಂಡನೆ ಮಾಡಿದರು. ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ
ಪ್ರವೀಣ್ ಕೆದ್ದು ಸ್ವಾಗತಿಸಿ, ವಸಂತ್ ಶರ್ಮಾ ಉಜಿರೆ ನಿರೂಪಿಸಿದರು.