ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಪ್ರೇರಣೆ ನೀಡುವುದೇ ಯೋಜನಾ ಮಾದರಿಗಳ ಪ್ರದರ್ಶನದ ಉದ್ಧೇಶ:ಸತೀಶ್ಚಂದ್ರ ಉಜಿರೆ ಎಸ್ ಡಿ ಎಂ ಎಂಜಿನಿಯರ್ ಕಾಲೇಜಿನಲ್ಲಿ ರಾಜ್ಯಮಟ್ಟದ ಯೋಜನಾ ಮಾದರಿಗಳ ಪ್ರದರ್ಶನ

 

 

 

ಉಜಿರೆ: ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು, ಸಮಾಜಮುಖಿ ಚಿಂತನೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ಸದುಪಯೋಗ ಮಾಡಿ ಸೃಜನಶೀಲತೆಯ ಅಭಿವ್ಯಕ್ತಿಯೊಂದಿಗೆ ಉಪಯುಕ್ತ ಯೋಜನಾ ಮಾದರಿಗಳನ್ನು ರೂಪಿಸಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ, ಪ್ರೇರಣೆ ನೀಡುವುದೇ ಯೋಜನಾ ಮಾದರಿಗಳ ಪ್ರದರ್ಶನದ ಉದ್ದೇಶವಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯಮಟ್ಟದ ಯೋಜನಾ ಮಾದರಿಗಳ ಪ್ರದರ್ಶನವನ್ನು ಉದ್ಘಾಟಸಿ ಮಾತನಾಡಿದರು.

 

 

 

ಒಟ್ಟು ನೂರಕ್ಕೂ ಮಿಕ್ಕಿ ಯೋಜನಾ ಮಾದರಿಗಳು ಬಂದಿದ್ದು ಅವುಗಳಲ್ಲಿ ಉತ್ತಮವಾದ 32 ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಡ್ರೋನ್ ಆಧಾರಿತ ಕೀಟನಾಶಕ ಸ್ಪ್ರೇಯರ್, ಲೇಸರ್ ಬೇಲಿ ಬಳಸಿ ಭದ್ರತಾ ವ್ಯವಸ್ಥೆ, ಹವಾ ನಿಯಂತ್ರಣ, ಮಾನಸಿಕ ಖಿನ್ನತೆ ಮಾಪನ ಮತ್ತು ಪರಿಹಾರ ಇತ್ಯಾದಿ ಹತ್ತು-ಹಲವು ಆಕರ್ಷಕ ಮಾದರಿಗಳು ಪ್ರೇಕ್ಷಕರ ಗಮನ ಸೆಳೆದವು.

 

 

ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ನೇತೃತ್ವದಲ್ಲಿ ಡಾ. ಸತ್ಯನಾರಾಯಣ ಭಟ್ ಮತ್ತು ಎಲ್ಲಾ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಮಾದರಿಗಳ ಪ್ರದರ್ಶನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.
ರಾಜ್ಯ ಸರ್ಕಾರದಿಂದ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿಗೆ ಯೋಜನಾ ಮಾದರಿ ತಯಾರಿಕೆಗಾಗಿ ₹ 1.25 ಕೋಟಿ ರೂ ಅನುದಾನ ಮಂಜೂರು ಮಾಡಿದ್ದು ಎರಡು ವರ್ಷಗಳಲ್ಲಿ ಎಂಟು ಯೋಜನಾ ಮಾದರಿಗಳನ್ನು ರೂಪಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಅಶೋಕ ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸೋಮವಾರ ಮತ್ತು ಇಂದು ಮಂಗಳವಾರ ಉಜಿರೆ ಪರಿಸರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದರಿಗಳನ್ನು ವೀಕ್ಷಿಸಲು ಉಚಿತ ಅವಕಾಶ ನೀಡಿದ್ದು ಸೋಮವಾರ ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಾದರಿಗಳನ್ನು ವೀಕ್ಷಿಸಿದರು.

error: Content is protected !!