ಬೆಳ್ತಂಗಡಿ ವಕೀಲರಿಂದ ವಿದ್ಯೆಯಿಲ್ಲದ ನಮಗೆ ಅನ್ಯಾಯ: ಜಮೀನಿನ ಅಕ್ರಮ ಪರಭಾರೆ,ನ್ಯಾಯಾಕ್ಕಾಗಿ ಹೋರಾಟ: ನಕಲಿ ದಾಖಲೆ ಸೃಷ್ಟಿಸಿ ವಂಚನೆ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯಿಂದ ಆರೋಪ:

 

 

 

ಬೆಳ್ತಂಗಡಿ; ಕರಾಯ ಗ್ರಾಮದ ಕೆರೆಕೋಡಿ ನಿವಾಸಿ ಅನಕ್ಷರಸ್ಥ ಮಹಿಳೆಗೆ ವಂಚನೆ ಮಾಡಿ ಬೆಳ್ತಂಗಡಿಯ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹಾಗೂ ಇತರರು ಸೇರಿ ಜಮೀನನ್ನು ಅಕ್ರಮವಾಗಿ ಪರಾಭಾರೆ ಮಾಡಿದ್ದು ಈಗಾಗಲೇ ಜಮೀನು ಉಳಿಸಲು ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ ಅಕ್ರಮವಾಗಿ ಪರಾಭಾರೆಯಾದ ಜಮೀನನ್ನು ತಮಗೆ ಮರಳಿ ಸಿಗುವಂತೆ ಮಾಡಬೇಕು ಎಂದು ಜಮೀನು ಕಳೆದುಕೊ‌ಡ ವಾರಿಜ ಅವರು ಸರಕಾರ ಅಧಿಕಾರಿಗಳನ್ನು ವಿನಂತಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾನು ಅನಕ್ಷರಸ್ಥೆಯಾಗಿದ್ದು ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ನ್ಯಾಯವಾದಿಯಾಗಿದ್ದರು. ಅವರು ಹಾಗೂ ಇತರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮನ್ನು ವಂಚಿಸಿ ಜಮೀನನ್ನು ಅಕ್ರಮವಾಗಿ ಪರಾಭಾರೆ ಮಾಡಿದ್ದಾರೆ. ಅವರ ವಿರುದ್ದ ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಿದ್ದು ಇದೀಗ ಠಾಣೆಯಲ್ಲಿ ಪ್ರಕರಣವೂ ದಾಖಲಿಸಲಾಗಿದೆ. ಆದರೆ ಇನ್ನೂ ಜಮೀನು ತಮ್ಮ ವಶದಲ್ಲಿದ್ದರೂ ದಾಖಲೆಗಳು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲಾಗಿದ್ದು ಅದನ್ನು ಸರಿಪಡಿಸಿ ಕೊಡುವಂತೆ ವಿನಂತಿಸಿದರು.
ಅಕ್ರಮವಾಗಿ ನಡೆದ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ ಕುಟುಂಬದ ಸದಸ್ಯ ಪ್ರಸಾದ್ ಇದು ನ್ಯಾಯವಾದಿಯವರು ಉದ್ದೇಶ ಪೂರ್ವಕವಾಗಿ ಸಂಚು ನಡೆಸಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ನೋಂದಣಾಧಿಕಾರಿಯವರೂ ಪಾಲುದಾರರಾಗಿ ನಡೆಸಿರುವ ವಂಚನೆಯಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗ ಜಮೀನಿನ ಪರಾಭಾರೆಗೆ ತಡೆಯಾಜ್ಞೆ ಇರುವಾಗ ಅಕ್ರಮ ದಾಖಲೆ ಸೃಷ್ಟಿಸಿ ಪರಾಭಾರೆ ಮಾಡಲಾಗಿದೆ. ಕರಾಯ ನಿವಾಸಿಗಳಾದ ಸುರೇಶ್ , ಹಾಗೂ ಸದಾನಂದ ಎಂಬವರಿಗೆ ಕೇವಲ 600ರೂಗೆ ಒಂದು ಎಕ್ರೆ ಜಮೀನು ಮಾರಿರುವುದಾಗಿ ದಾಖಲೆಗಳನ್ನು ನಿರ್ಮಿಸಲಾಗಿದೆ. ಇದಾದ ಬಳಿಕ ಇದರಲ್ಲಿ ಕೇವಲ 12 ಸೆನ್ಸ್ ಜಾಗವನ್ನು ನಝೀರ್ ಎಂಬವರಿಗೆ ರೂ 3,41,000 ಮಾರಾಟ ಮಾಡಲಾಗಿರುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಮೊದಲನೆಯ ಮಾರಾಟದ ದಾಖಲೆಯಲ್ಲಿ ನಝೀರ್ ಅವರು ಸಾಕ್ಷಿಯಾಗಿ ಕಾಣಿಸಿಕೊಂಡಿರುವುದನ್ನು ಗಮನಿಸಿದರೆ ಇದರಲ್ಲವೂ ಪೂರ್ವ ಯೋಜಿತ ಕೃತ್ಯಗಳಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ರಾಜಕೀಯ ಹಾಗೂ ಹಣದ ಬಲದಿಂದ ಈ ವರೆಗೆ ಅವರ ವಿರುದ್ದ ದೂರು ದಾಖಲಾಗದಂತೆ ನೋಡಿಕೊಂಡಿದ್ದರು ಇದೀಗ ಅವರ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.
ವಿಶ್ವ ಹಿಂದೂ ಪರಿಷತ್ ಮುಖಂಡರಾಗಿರುವ ಸುಬ್ರಹ್ಮಣ್ಯ ಕುಮಾರ್ ಅಗರ್ತ ಅವರು ವಂಚನೆ ಮಾಡಿದ್ದು ನ್ಯಾಯಕ್ಕಾಗಿ ಸಂಘಟನೆಯ ಹಿರಿಯ ಮುಖಂಡರುಗಳ ಬಳಿಯೂ ಹೋಗಿದ್ದೇವೆ ಎಲ್ಲರೂ ಅನ್ಯಾಯವಾಗಿದೆ ಎಂದು ಹೇಳುತ್ತಾರೆ ಆದರೆ ಯಾರೂ ಸರಿಪಡಿಸುವ ಕಾರ್ಯ ಮಾಡಿಲ್ಲ ಎಂದರು.
ನಮ್ಮ ಪರವಾಗಿ ಕೇಸು ಹಾಕಲು ನ್ಯಾಯವಾದಿಗಳೇ ಸಿಗದಂತಹ ಸ್ಥಿತಿ ಎದುರಿಸಿದ್ದೆವು ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾರಿಜಾ, ಗೀತಾ ಹಾಗೂ ಪ್ರಸಾದ್ ಉಪಸ್ಥಿತರಿದ್ದರು

error: Content is protected !!