ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಹಿನ್ನೆಲೆ ‘ಪ್ರಜಾಪ್ರಕಾಶ’ ತಂಡದಿಂದ ಗೌರವಿಸಲಾಯಿತು.
‘ಪ್ರಜಾಪ್ರಕಾಶ’ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ (ಮ್ಯಾನೆಜಿಂಗ್ ಡೈರೆಕ್ಟರ್) ಪುಷ್ಪರಾಜ್ ಶೆಟ್ಟಿ, ವರದಿಗಾರ ತಂಡದ ಭುವನೇಶ್ ಗೇರುಕಟ್ಟೆ, ಪ್ರಸಾದ್ ಶೆಟ್ಟಿ ಎಣಿಂಜೆ, ಹರ್ಷಿತ್ ಪಿಂಡಿವನ ಇದ್ದರು.
‘ಪ್ರಜಾಪ್ರಕಾಶ ನ್ಯೂಸ್’ ಆ್ಯಪ್ ವೀಕ್ಷಕರಾದ ನಿಮ್ಮೆಲ್ಲರ ಪ್ರೋತ್ಸಾಹದಿಂದ 1 ವರ್ಷಕ್ಕೂ ಹೆಚ್ಚು ಕಾಲ ಸಮಾಜಮುಖಿ ವಾರ್ತೆ ಹಾಗೂ ಮಾಹಿತಿಯನ್ನು ನೀಡುವ ಮೂಲಕ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಈಗಾಗಲೇ ದಿನಂಪ್ರತಿ 30 ಸಾವಿರಕ್ಕಿಂತಲೂ ತಿಂಗಳಿಗೆ 13 ಲಕ್ಷ ಕ್ಕಿಂತಲೂ ಅಧಿಕ ಓದುಗರನ್ನು ಅತೀ ಕಡಿಮೆ ಅವಧಿಯಲ್ಲಿ ನಮ್ಮ ಅ್ಯಪ್ ಹೊಂದಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ತಿಳಿಸುವ ಮಾಹಿತಿಯಲ್ಲಿ ರಾಜಿಯಾಗದೆ, ನಿಷ್ಪಕ್ಷಪಾತವಾಗಿ ವರದಿ, ವಿಶೇಷ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನ ಮೆಚ್ಚುಗೆಗೂ ಪಾತ್ರವಾಗಿದೆ. ಇನ್ನಷ್ಟು ಪರಿಣಾಮಕಾರಿ, ಸಕಾಲಿಕ ವರದಿಗಳ ಮೂಲಕ ಓದುಗರನ್ನು ತಲುಪಲಿದ್ದೇವೆ.
ಅನುಭವಿ ಪತ್ರಕರ್ತರ ತಂಡದಿಂದ ಲೋಕಾರ್ಪಣೆಗೊಂಡ ‘ಪ್ರಜಾಪ್ರಕಾಶ’ ವಿಡಿಯೋ ಮಾಹಿತಿಯನ್ನು ಹಾಗೂ ವಿಶೇಷ ಕಾರ್ಯಕ್ರಮಗಳ ಲೈವ್ ದೃಶ್ಯಾವಳಿಗಳನ್ನು ಯೂಟ್ಯೂಬ್ ಚಾನಲ್ ಮೂಲಕ ವೀಕ್ಷಕರ ಮುಂದಿಟ್ಟಿದೆ. ದೇಶದ ವಿವಿಧ ಭಾಗಗಳ ಹಾಗೂ ವಿದೇಶಗಳ ವೀಕ್ಷಕರೂ ಲೈವ್ ವಿಡಿಯೋ ಗುಣಮಟ್ಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀಕ್ಷಕರ ಪ್ರೋತ್ಸಾಹದಿಂದ ವಿಭಿನ್ನ ಆಲೋಚನೆ ಹಾಗೂ ಯೋಜನೆಯೊಂದಿಗೆ ಆದಷ್ಟು ಶೀಘ್ರವಾಗಿ ನಿಮ್ಮನ್ನು ತಲುಪಲಿದ್ದೇವೆ. ಬೆಳ್ತಂಗಡಿ ತಾಲೂಕು ಹಾಗೂ ಜಿಲ್ಲೆಯ ಪ್ರತಿ ಮನೆಗೂ ‘ಪ್ರಜಾಪ್ರಕಾಶ ನ್ಯೂಸ್’ ತಲುಪಬೇಕು ಎನ್ನುವುದು ತಂಡದ ಆಶಯವಾಗಿದೆ.