ಲಾಯಿಲ ಗ್ರಾಮದ  ವಿಕಾಸ ಹಬ್ಬದಲ್ಲಿ ಕಣ್ಮನ ಸೆಳೆದ ರಂಗೋಲಿ..! ಗ್ರಾಮ ಪಂಚಾಯತ್ ಸದಸ್ಯೆ ಕೈಚಳಕದಲ್ಲಿ ಮೂಡಿಬಂದ ಶಾಸಕ ಹರೀಶ್ ಪೂಂಜ ಭಾವಚಿತ್ರ

 

 

ಬೆಳ್ತಂಗಡಿ:ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಲಾಯಿಲ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಜುಲೈ 10 ಆದಿತ್ಯವಾರ  ಲಾಯಿಲ ಗ್ರಾಮದ ವಿಕಾಸ  ಹಬ್ಬ ಕಾರ್ಯಕ್ರಮ ನಡೆಯಿತು.‌ಈ ಕಾರ್ಯಕ್ರಮದಲ್ಲಿ  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ರಂಗೋಲಿಯಲ್ಲಿ ಬಿಡಿಸಿದ ಭಾವಚಿತ್ರ‌.

 

ನೋಡಿದವರನ್ನೆಲ್ಲ ಆಕರ್ಷಿಸುತಿತ್ತು .ಈ ರಂಗೋಲಿಯನ್ನು ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ  ಆಶಾಲತಾ ಪ್ರಶಾಂತ್  ಬಿಡಿಸಿದ್ದು ಈ ಚಿತ್ರವನ್ನು ಅವರು ಸುಮಾರು 6 ಗಂಟೆ ಸಮಯ ತೆಗೆದುಕೊಂಡು ಬಿಡಿಸಿದ್ದಾರೆ.

 

 

ಸುಂದರವಾಗಿ ಬಿಡಿಸಿದ ಇವರ ಕೈ ಚಳಕಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅದಲ್ಲದೇ ಶಾಸಕ ಹರೀಶ್ ಪೂಂಜ ಕೂಡ ಇದನ್ನು ನೋಡಿ ಅಭಿನಂದನೆ ಸಲ್ಲಿಸಿದ್ದಾರೆ.

 

 

ಈಗಾಗಲೇ  ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರ ಚಿತ್ರಗಳನ್ನು  ರಂಗೋಲಿ ಹಾಗೂ ಪೆನ್ಸಿಲ್ ಮೂಲಕ ಅವರು ಬಿಡಿಸಿದ್ದಾರೆ.

error: Content is protected !!