ಭಾರೀ ಮಳೆಯಿಂದ ತಾಲೂಕಿನ ವಿವಿಧೆಡೆ ಅನಾಹುತ: ಗಂಡಿಬಾಗಿಲು ಮನೆಗೆ ಗುಡ್ಡ ಕುಸಿದು ಹಾನಿ: ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ ಶಾಸಕ ಹರೀಶ್ ಪೂಂಜ:

 

 

ಬೆಳ್ತಂಗಡಿ :ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು ಬೆಳ್ತಂಗಡಿ ತಾಲೂಕಿನಲ್ಲಿಯೂ ವಿಪರೀತ ಮಳೆಯಾಗುತ್ತಿದೆ.

 

 

ತಾಲೂಕಿನ ವಿವಿಧೆಡೆ ವಿವಿಧ ರೀತಿಯ ಅನಾಹುತಗಳು ನಡೆಯುತ್ತಿದೆ. ನೆರಿಯ ಗ್ರಾಮದ ಗಂಡಿಬಾಗಿಲು ಸಮೀಪ ಕುರಿಯಾಳ ಶೇರಿ ತೋಮಸ್ ಕೆ.ಜೆ. ಎಂಬವರ ಮನೆಗೆ ಗುಡ್ಡ ಕುಸಿದು ಹಾನಿಯಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲಿಸಿದರು ನಂತರ ಮನೆಯವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಂಡಾಜೆ ಬಳಿ ಬೃಹತ್ ಮರವೊಂದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದಲ್ಲದೇ 4 ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದಿದೆ. ಈ ಬಗ್ಗೆ ಸ್ಪಂದಿಸಿದ ಅರಣ್ಯ ಹಾಗೂ ಮೆಸ್ಕಾಂ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮರ ತೆರವುಗೊಳಿಸಿ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಿದ್ದಾರೆ.ಮುಂಡಾಜೆಯ ಕುಂಟಾಲ ಪಲ್ಕೆ ಬಳಿ ಮನೆಯ ಅವರಣ ಗೋಡೆ ಕುಸಿದು ಮನೆಗೆ ಹಾನಿ ಸಂಭವಿಸಿದೆ.ಅಳದಂಗಡಿ ಬಳಿ‌ ಕೃಷಿ ಭೂಮಿಗೆ ಭಾರೀ ಹಾನಿಯಾಗಿದೆ. ಅದಲ್ಲದೇ ತಾಲೂಕಿನ ವಿವಿಧೆಡೆ ಹಲವಾರು ಅನಾಹುತಗಳು ಸಂಭವಿಸಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ಪಡೆಯುತಿದ್ದಾರೆ.

error: Content is protected !!