ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ ಹಿಂದೂ ಯುವಕನ ಶಿರಚ್ಛೇದನ ರಾಜಸ್ಥಾನದ ಉದಯಪುರದಲ್ಲಿ ಭೀಕರ ಘಟನೆ

 

 

 

ದೆಹಲಿ:ಪ್ರವಾದಿ ಮಹಮ್ಮದ್‌ ಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದ ವ್ಯಕ್ತಿಯನ್ನು ಶಿರಚ್ಚೇದ ಮಾಡಿರುವ ಭೀಕರ ಘಟನೆ ರಾಜಸ್ಥಾನದ ಉದಯಪುರದಲ್ಲಿ ಇಂದು ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಗೌಸ್‌ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ.

ಉದಯಪುರ ನಗರದ ಮಾಲ್ದಾಸ್​ ಬೀದಿಯಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್ ಸಾಹು ಕೊಲೆಯಾದ ವ್ಯಕ್ತಿ. ಇವರು ಕೆಲ ದಿನಗಳ ಹಿಂದೆ ನೂಪುರ್​ ಶರ್ಮಾ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು.ಪೈಗಂಬರರ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್​ ಶರ್ಮಾರ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ನಗರದ ಟೈಲರ್ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್​ ಎಂಬುವವರು ಶರ್ಮಾ ಬೆಂಬಲಿಸಿ ಪೋಸ್ಟ್​ ಮಾಡಿದ್ದರು.

ಈ ಬಗ್ಗೆ ಮುಸ್ಲಿಂ ಯುವಕರು ಕನ್ಹಯ್ಯಾಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರು. ಇದರಿಂದ ಹೆದರಿದ ಆತ ಕೆಲ ದಿನಗಳ ಕಾಲ ಅಂಗಡಿಯನ್ನು ಮುಚ್ಚಿದ್ದರು. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇಂದು ಅಂಗಡಿಯನ್ನು ತೆರೆದಾಗ ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಬಂದ ಮುಸ್ಲಿಂ ಯುವಕರು ಅಳತೆ ಪಡೆಯುತ್ತಿದ್ದಾಗ ಕನ್ಹಯ್ಯಾರ ಶಿರಚ್ಚೇದನ ಮಾಡಿ ಅಲ್ಲಿಂದ ಪರಾರಿಯಾದರು. ಇದು ಉದಯಪುರದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ವ್ಯಾಪಾರಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

error: Content is protected !!