ಹಿಂದೂ ಯುವಕನ ಶಿರಚ್ಛೇದಿಸಿ ಪ್ರಧಾನಿ ಮೋದಿಗೆ ಜೀವ ಬೆದರಿಕೆ : ಹಂತಕರನ್ನು ಬಂಧಿಸಿದ ರಾಜಸ್ಥಾನ ಪೊಲೀಸರು

 

 

 

ದೆಹಲಿ:ಪ್ರವಾದಿ ಮಹಮ್ಮದ್‌ ಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪರವಾಗಿ ಪೋಸ್ಟ್​ ಹಾಕಿದ್ದ ವ್ಯಕ್ತಿಯ ಶಿರಚ್ಚೇದ ಮಾಡಿ, ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಿದ ಘಟನೆ ರಾಜಸ್ಥಾನದ ಉದಯಪುರದಲ್ಲಿ ಇಂದು ನಡೆದಿದೆ. ಘಟನೆಯ ಬಳಿಕ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಲ್ಲದೇ ಸಂಜೆ ವೇಳೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಗೌಸ್‌ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಎಂದು ಗುರುತಿಸಲಾಗಿದೆ. ಉದಯಪುರ ನಗರದ ಮಾಲ್ದಾಸ್​ ಬೀದಿಯಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದ ಕನ್ಹಯ್ಯಾ ಲಾಲ್ ಸಾಹು ಕೊಲೆಯಾದ ವ್ಯಕ್ತಿ. ಇವರು ಕೆಲ ದಿನಗಳ ಹಿಂದೆ ನೂಪುರ್​ ಶರ್ಮಾ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು.

error: Content is protected !!