ಲಾಯಿಲ:ಬಲೆಯೊಳಗೆ ಸಿಕ್ಕಿಹಾಕಿಕೊಂಡ ಹೆಬ್ಬಾವು: ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟ ಸ್ಥಳೀಯರು

 

 

 

ಬೆಳ್ತಂಗಡಿ:  ಬಾವಿಗೆ ಅಳವಡಿಸಲಾಗಿದ್ದ ಬಲೆಯೊಳಗೆ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರು  ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆದರ್ಶ ನಗರದಲ್ಲಿ  ಇಂದು ಸಂಜೆ  ಬಾವಿಗೆ ಕಸ ಬೀಳದಂತೆ ಹಾಕಿದ್ದ ಬಲೆಯೊಳಗೆ ದೊಡ್ಡ ಗಾತ್ರದ ಹೆಬ್ಬಾವೊಂದು ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

 

ಲಾಯಿಲ ಗ್ರಾಮದ ಆದರ್ಶ ನಗರದ ಬಾವಿಯೊಂದಕ್ಕೆ ಮರದ ಎಲೆ ಸೇರಿದಂತೆ ಕಸ ಕಡ್ಡಿಗಳು ಬೀಳದಂತೆ ಅಳವಡಿಸಿದ ಬಲೆಯೊಳಗೆ ದೊಡ್ಡ ಗಾತ್ರದ ಹೆಬ್ಬವೊಂದು ಸಿಲುಕಿ ಸಾವು ಬದುಕಿನ ನಡುವೆ ಒದ್ದಾಡುತಿತ್ತು ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳಾದ ಅಬ್ದುಲ್ ರಶೀದ್ ಮೊಹಮ್ಮದ್ ಸಲೀಂ, ರಾಬಿ ಮತ್ತು ಉಸ್ಮಾನ್ ಸೇರಿ ಬಲೆಯನ್ನು ತುಂಡರಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

error: Content is protected !!