ನಾಲ್ಕು ವರ್ಷದಲ್ಲಿ 3 ಸಾವಿರ ಹಕ್ಕು ಪತ್ರ ವಿತರಣೆ: ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ ,94ಸಿ ಸಿ, ಹಕ್ಕುಪತ್ರ ವಿತರಣೆ ಕಾರ್ಯಕ್ರಮ

 

 

 

 

ಬೆಳ್ತಂಗಡಿ:ತಾಲೂಕಿನಲ್ಲಿ  94ಸಿ  ಮತ್ತು 94ಸಿಸಿ ಹಕ್ಕುಪತ್ರಗಳನ್ನು‌ ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ನೀಡುವ ದೃಷ್ಟಿಯಿಂದ
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ಶಾಸಕನಾಗಿ ಬಂದ್ದ ನಂತರ ಮಾಡಿದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ.
ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

 

 

ಅವರು ಸೋಮವಾರ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕಂದಾಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.ಸರ್ಕಾರದ ಜನಪರ ಯೋಜನೆಗಳು ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟ ಬೇಕು ಎಂಬ ನಿಟ್ಟಿನಲ್ಲಿ ತಾಲೂಕಿನ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದ ಮೂಲಕ ಜನರಿಗೆ ಉತ್ತಮ ರೀತಿಯಲ್ಲಿ ಮುಟ್ಟುತಿದೆ.ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉಜ್ವಲ ಗ್ಯಾಸ್ ಯೋಜನೆಯಿಂದಾಗಿ ತಾಲೂಕಿನ ಸುಮಾರು 18 ಸಾವಿರ ಮನೆಗಳಿಗೆ ಗ್ಯಾಸ್ ವಿತರಿಸುವಂತಹ ವ್ಯವಸ್ಥೆ ಆಗಿದೆ .ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೃಷಿಕರಿಗೆ 6 ಸಾವಿರ ರೂಪಾಯಿಂತೆ ತಾಲೂಕಿನ ಶೆ 70 ಕೃಷಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವ ಮೂಲಕ ಉತ್ತಮ ರೀತಿಯಲ್ಲಿ ಅನುಷ್ಟಾನ ಆಗುತ್ತಿದೆ.ಈ ರೀತಿಯ ಸರ್ಕಾರದ ಯೋಜನೆಗಳು ನಮ್ಮ ತಾಲೂಕಿನ ಜನರಿಗೆ ಸಮರ್ಪಕವಾಗಿ ಮುಟ್ಟಬೇಕು ಎಂಬ ನಿಟ್ಟಿನಲ್ಲಿ ಅದಕ್ಕೆ ಬೇಕಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ.

 

ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ನೋಡಿದಾಗ ತಾಲೂಕಿನಾದ್ಯಂತ ಸರ್ವ ಋತು ರಸ್ತೆಗಳಾಗಬೇಕು ಎಂಬ ನಿಟ್ಟಿನಲ್ಲಿ ಅಗಲದ ರಸ್ತೆ ನಿರ್ಮಿಸಿ ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗುತ್ತಿದೆ.ಅದಲ್ಲದೇ ಕಿಂಡಿ ಅಣೆಕಟ್ಟುಗಳನ್ನು ರಚಿಸಿ ಭೂಮಿಯ ಅಂತರ್ಜಾಲ ಹೆಚ್ಚಿಸುವ ಕಾರ್ಯಗಳೂ ನಡೆಯುತ್ತಿದೆ. ವಿದ್ಯುತ್ ವ್ಯವಸ್ಥೆಗೆ ಬೇಕಾಗಿ ತಾಲೂಕಿನ ವಿವಿಧ ಕಡೆಗಳಲ್ಲಿ ಸುಮಾರು 440 ಟ್ರಾನ್ಸ್ ಫಾರ್ಮರ್ ಅನುಷ್ಟಾನ ಗೊಂಡಿದೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ದೃಷ್ಟಿಯಲ್ಲಿ ತಾಲೂಕಿನ ಕೆಲಸಗಳು ನಡೆಯುತ್ತಿವೆ. ಎಂದರು.ಕಾರ್ಯಕ್ರಮದಲ್ಲಿ
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ನಾವೂರು ಗ್ರಾ.ಪಂ. ಅಧ್ಯಕ್ಷ ಗಣೇಶ ಗೌಡ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ
ಯಶವಂತ್, ನಿಡ್ಲೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಹೆಬ್ಬಾರ್,
ಕಲ್ಮಂಜ ಗ್ರಾ.ಪಂ. ಅಧ್ಯಕ್ಷ
ಶ್ರೀಧರ್, ಶಿರ್ಲಾಲ್ ಗ್ರಾ.ಪಂ. ಅಧ್ಯಕ್ಷ ತಾರಾನಾಥ ಗೌಡ,
ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ
ಮೀನಾಕ್ಷಿ ಶೆಟ್ಟಿ, ಕಳಿಯ ಗ್ರಾ.ಪಂ. ಅಧ್ಯಕ್ಷೆ
ಸುಭಾಷಿಣಿ ಜೆ.ಗೌಡ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷ
ಕೆ.ವಿ. ಪ್ರಸಾದ್,ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ,ಬಳಂಜ ಗ್ರಾ.ಪಂ. ಅಧ್ಯಕ್ಷ ಹೇಮಂತ್, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ,
ಉಪತಹಸೀಲ್ದಾರ್ ದಯಾನಂದ ಹೆಗ್ಡೆ, 94ಸಿ ವಿಷಯ ನಿರ್ವಾಹಕ ಶಂಕರ್, ಗ್ರಾಮಕರಣಿಕರಾದ ಸತೀಶ್ ಪಿಂಟೋ, ಪರಮೇಶ್ ಟಿ. ಉಪಸ್ಥಿತರಿದ್ದರು.94ಸಿ ವಿಷಯ ನಿರ್ವಾಹಕಿ ಹೇಮಾ ಕೆ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.ಬೆಳ್ತಂಗಡಿ ತಾಲೂಕಿನ ಮೂರು ಹೋಬಳಿಯ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಲಾಯಿತು. ಬೆಳ್ತಂಗಡಿ‌ ಹೋಬಳಿಯಲ್ಲಿ 4 ಮಂದಿಗೆ 94ಸಿಸಿ, 22 ಮಂದಿಗೆ 94ಸಿ,ಕೊಕ್ಕಡ ಹೋಬಳಿಯ 40 ಮಂದಿಗೆ ಹಾಗೂವೇಣೂರು ಹೋಬಳಿಯ 44 ಮಂದಿಗೆ 94ಸಿ ಸೇರಿದಂತೆ  ತಾಲೂಕಿನ ಒಟ್ಟು 110 ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.

error: Content is protected !!