ಬೆಳ್ತಂಗಡಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ ಅಂಬೇಡ್ಕರ್ ಭವನದ ಬಳಿ ರಸ್ತೆಗೆ ಉರುಳಿಬಿದ್ದ ಮರ ತಪ್ಪಿದ ದೊಡ್ಡ ದುರಂತ

 

 

 

ಬೆಳ್ತಂಗಡಿ:ತಾಲೂಕಿನಲ್ಲಿ ಮಧ್ಯಾಹ್ನ ನಂತರ ಭಾರೀ ಮಳೆ ಸುರಿದಿದ್ದು ಕೆಲವೆಡೆ ಗಾಳಿ ಸಹಿತ ಮಳೆಯಾಗಿದೆ. ಬೆಳ್ತಂಗಡಿಯ ಹಳೇ ಸೇತುವೆ ರಸ್ತೆಯ ಅಂಬೇಡ್ಕರ್ ಭವನದ ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡಾಗಿ ಬಿದ್ದಿದೆ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಇಂದು ಸಂಜೆ ಸುಮಾರು 5.30 ರ ಸುಮಾರಿಗೆ ಮರ ಉರುಳಿಬಿದ್ದಿದೆ. ಹಗಲು ಹೊತ್ತಿನಲ್ಲಿ ಈ ಮರದ ಅಡಿಯಲ್ಲಿ ಬಸ್ಸು ಹಾಗೂ ಇತರ ವಾಹನಗಳು ಹಾಗೂ ಜನ ಸಂಚಾರ ಇರುತಿದ್ದು ಅದೃಷ್ಟವಶಾತ್ ಮರ ಸಂಜೆ ಉರುಳಿ ಬೀಳುವ ಸಂದರ್ಭ ಯಾವುದೇ ವಾಹನ ಅಥವಾ ಜನ ಸಂಚಾರ ಇಲ್ಲದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

 

ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದಾಗ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಬಂದು ಪರಿಶೀಲಿಸಿದ್ದಾರೆ. ರಾತ್ರಿಯಾದ್ದರಿಂದ ತುಂಡಾದ ಕಂಬ ಹಾಗೂ ತಂತಿ ಬದಲಾವಣೆ ಮಾಡಲು ಆಸಾಧ್ಯವಾದ್ದರಿಂದ ಮರ ತೆರವು  ಹಾಗೂ ದುರಸ್ತಿ ಕಾರ್ಯ ನಾಳೆ ಮುಂದುವರಿಯಲಿದೆ.

error: Content is protected !!