ಕರ್ತವ್ಯದ ವೇಳೆ ಹೃದಯಾಘಾತ ಗ್ರಾಮ ಸಹಾಯಕ ಕುಸಿದು ಬಿದ್ದು ಸಾವು ಮೇಲಂತಬೆಟ್ಟು ಗ್ರಾಮದಲ್ಲಿ ನಡೆದ ಘಟನೆ

 

 

 

ಬೆಳ್ತಂಗಡಿ : ಕರ್ತವ್ಯದ ವೇಳೆ ಗ್ರಾಮಸಹಾಯಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿ  ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು, ಮುಂಡೂರು ಗ್ರಾಮದ ಗ್ರಾಮಸಹಾಯಕರಾದ ಸುಂದರ್ ಗೌಡ (44) ಎಂಬವರು ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೇಲಂತಬೆಟ್ಟು ಗ್ರಾಮಲೆಕ್ಕಿಗ ಕಚೇರಿಯಲ್ಲಿ ಗ್ರಾಮ ಸಹಾಯಕ ಸುಂದರಗೌಡ ಮತ್ತು
ಗ್ರಾಮಲೆಕ್ಕಿಗ ಶಿವಕುಮಾರ್ ಇಂದು   ಕರ್ತವ್ಯ ನಿರ್ವಹಿಸುತ್ತಿದ್ದರು ಈ ವೇಳೆ ಗ್ರಾಮಲೆಕ್ಕಿಗ ಶಿವಕುಮಾರ್ ಅವರು ಹೊರಗೆ ಹೋಗಿ ವಾಪಸ್ ಬಂದಾಗ ಸುಂದರ ಗೌಡ ಅವರು ಕುರ್ಚಿಯಿಂದ ಕೆಳಗೆ ಬಿದ್ದಿದ್ದರು ತಕ್ಷಣ ಹೊರಗಡೆ ಇದ್ದ ಮುಂಡೂರು ಗ್ರಾಮದ ಸದಸ್ಯರಾದ ಸಂತೋಷ್ ಅವರಿಗೆ ಮಾಹಿತಿ ತಿಳಿಸಿದಾಗ ಅವರು ತನ್ನ ಕಾರಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.ಅದರೆ ಅದಾಗಲೇ ಸುಂದರ್ ಗೌಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವಿಚಾರ ತಿಳಿದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ಕಚೇರಿ ಸಿಬ್ಬಂದಿಗಳು , ಗ್ರಾಮಲೆಕ್ಕಿಗರು ,ಗ್ರಾಮಸಹಾಯಕರು, ಸ್ನೇಹಿತರು ಬಂದು ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

error: Content is protected !!