ಆಸ್ಪತ್ರೆ ಸೇರಿದಂತೆ ಸರ್ಕಾರಿ ಕಛೇರಿಗಳಿಗೆ ಧಿಡೀರ್ ಭೇಟಿ‌ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿ ಅವ್ಯವಸ್ಥೆಯ ಬಗ್ಗೆ ಗರಂ ಆದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ‌

 

ಬೆಳ್ತಂಗಡಿ : ಸಮುದಾಯ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳಿಗೆ ಲೋಕಾಯಕ್ತ ಅಧಿಕಾರಿಗಳು ಧಿಡೀರ್ ಭೇಟಿ ಪರಿಶೀಲನೆ ನಡೆಸಿ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ವಿವಿಧ ಇಲಾಖೆಯಾದ ತಾಲೂಕು ಸರಕಾರಿ ಆಸ್ಪತ್ರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ , ಶಿಶು ಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ‌ ನೀಡಿ ಆಸ್ಪತ್ರೆಯನ್ನು ಪರಿಶೀಲನೆ ‌ನಡೆಸಿದರು ಈ ವೇಳೆ ಅಲ್ಲಿಯ ಅವ್ಯವಸ್ಥೆ ನೋಡಿ ಲೋಕಾಯಕ್ತ ಅಧಿಕಾರಿಗಳು ಅಸಾಮಾಧಾನಗೊಂಡಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ವೈದ್ಯರು ಬಾರದೆ ಇರುವುದು ,ಶುಚಿತ್ವ ಇಲ್ಲದೆ ಇರುವುದನ್ನು ಗಮನಿಸಿ ಸರಿಪಡಿಸಲು ಸೂಚನೆ ನೀಡಿದ್ದಾರೆ, ಸರಕಾರಿ ಆಸ್ಪತ್ರೆಯ ಬಗ್ಗೆ ಹಲವು ದೂರುಗಳು ಬರುತಿದ್ದರೂ ಸರಿಪಡಿಸದೇ ಇರುವ ಅಧಿಕಾರಿಗಳ ಮೇಲೆ‌ ಕ್ರಮ ಕೈಗೊಳ್ಳುವುದಾಗಿ ಲೋಕಾಯಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಲೋಕಾಯಕ್ತ ಅಧಿಕಾರಿಗಳು ಅಲ್ಲಿ ತಿಂಗಳಿಗೆ ಐದು ಸಾವಿರ ಸಿಗುವ ಮಾತೃಶ್ರೀ ಯೋಜನೆಯ ಹಣ ನೀಡದೆ ಇದ್ದ ಬಗ್ಗೆ ಲೋಕಾಯಕ್ತಕ್ಕೆ ದೂರು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬೆಳ್ತಂಗಡಿ ಕೋರ್ಟ್ ರಸ್ತೆಯಲ್ಲಿರುವ ಶಿಶು ಮಂದಿರಕ್ಕೆ ಭೇಟಿ‌ ನೀಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶೀಲನೆ‌ ನಡೆಸಿದರು.

ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ‌ ನೀಡಿ ಅಲ್ಲಿಯ ಎಲ್ಲಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕರ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸೂಚಿಸಿದ್ದಾರೆ.

ಬೆಳ್ತಂಗಡಿ ವಿವಿಧ ಇಲಾಖೆ ಭೇಟಿ ವೇಳೆ ಲೋಕಾಯಕ್ತ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಕಲಾವತಿ , ಡಿವೈಎಸ್ಪಿ ಚೆಲುವರಾಜ್, ಇನ್ಸ್‌ಪೆಕ್ಟರ್ ಅಮಾನುಲ್ಲಾ ಹಾಗೂ ಸಿಬ್ಬಂದಿ ಗಾಯತ್ರಿ ಚಾಲಕರಾದ ಮಹೇಶ್, ದೊಡಣ್ಣ, ನವೀನ್ ಇದ್ದರು.

error: Content is protected !!