ಚಾರ್ಮಾಡಿ ಬೈಕ್ ಡಿಕ್ಕಿ ಲಾರಿಯಡಿಗೆ ಸಿಲುಕಿ ಯುವಕ ದಾರುಣ ಸಾವು

 

 

 

ಬೆಳ್ತಂಗಡಿ: ಲಾರಿಯಡಿಗೆ ಸಿಲುಕಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ನಡೆದಿದೆ.
ಚಾರ್ಮಾಡಿ ಸಮೀಪದ ಹೋಟೆಲೊಂದಕ್ಕೆ ಸ್ಥಳೀಯ  ಯುವಕ ಕಕ್ಕಿಂಜೆಯಿಂದ ಕೆಲಸ ಮುಗಿಸಿ  ಬೈಕಿನಲ್ಲಿ ತೆರಳುತಿದ್ದ ವೇಳೆ ಎದುರಿನಿಂದ ಬರುತಿದ್ದ  ಇನ್ನೊಂದು  ಬೈಕ್  ಪರಸ್ಪರ ಡಿಕ್ಕಿ ಹೊಡೆದಿದೆ .ಈ ಸಂದರ್ಭ ಹಿಂದಿನಿಂದ ಬರುತಿದ್ದ ಲಾರಿಯಡಿಗೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.  ಅದಲ್ಲದೇ ಇನ್ನೊಬ್ಬ ಸವಾರನಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ .ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ‌ ಈ ಬಗ್ಗೆ ಪ್ರಕರಣ ದಾಖಲಾಗಿದೆ.

error: Content is protected !!