ಜೂ 05 ಬೆಳ್ತಂಗಡಿಯಲ್ಲಿ ಬಂಟರ ಸಮಾವೇಶ ಬಂಟ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಬಂಟ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನ ಹಾಸ್ಯ ನಾಟ್ಯ ವೈಭವ

 

 

 

ಬೆಳ್ತಂಗಡಿ:ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ
ಇದರ ಆಶ್ರಯದಲ್ಲಿ  ಜೂ 05 ಆದಿತ್ಯವಾರ  ಗುರುವಾಯನಕೆರೆ ಬಂಟರ ಭವನದಲ್ಲಿ ಬಂಟರ ಸಮಾವೇಶ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ತಾಲೂಕಿನ ಬಂಟ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, 10 ಗಂಟೆಯಿಂದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರು ಅಶೀರ್ವಚನ ಮಾಡಲಿದ್ದಾರೆ.

 

 

 

ದ.ಕ.ಜಿಲ್ಲಾ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಪುಷ್ಪರಾಜ್ ಶೆಟ್ಟಿ ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇವರು ವಹಿಸಿಕೊಳ್ಳಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸದಾಶಿವ ಶೆಟ್ಟಿ ಚೇರ್ ಮಾನ್ ಹೇರಂಬ ಸಮೂಹ ಸಂಸ್ಥೆಗಳು ಮುಂಬಯಿ, ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಧ್ಯಕ್ಷರು, ತುಳು ಕೂಟ ಬರೋಡ, ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷರು ಗುರ್ಮೆ ಪೌಂಡೇಶನ್, ಉದಯ ಕುಮಾರ್ ಶೆಟ್ಟಿ ಮುನಿಯಾಲು ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರು ವಲಯ ಇವರು ಭಾಗವಹಿಸಲಿದ್ದಾರೆ.

 

 

 

ಅಪರಾಹ್ನ 3 ಗಂಟೆಯಿಂದ ಡಿ. ಮಾಧವ ಬಂಗೇರ ಸಂಯೋಜನೆ ನಿರೂಪಣೆಯಲ್ಲಿ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ , ಗಿರೀಶ್ ರೈ ಕಕ್ಕೆಪದವು ಭಾಗವತಿಕೆಯಲ್ಲಿ ಯಕ್ಷ ಗಾನ ಹಾಸ್ಯ ನಾಟ್ಯ ವೈಭವ ನಡೆಯಲಿದೆ. ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ಗುರುಪ್ರಸಾದ್ ಬೊಳಿಂಜಡ್ಕ, ರೋಹಿತ್ ಉಚ್ಚಿಲ, ಚಕ್ರತಾಳ ರಾಜೇಂದ್ರ , ಮುಮ್ಮೇಳ: ಹಾಸ್ಯ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ದಿನೇಶ್ ಕೋಡಪದವು. ನಾಟ್ಯ ರಕ್ಷಿತ್ ಶೆಟ್ಟಿ ಪಡ್ರೆ, ರಾಜೇಶ್ ನಿಟ್ಟೆ. ಭಾಗವಹಿಸಲಿದ್ದಾರೆ.

error: Content is protected !!