ಗೇರುಕಟ್ಟೆ ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆ ಪತ್ತೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಅಹಾರ ನಿರೀಕ್ಷಕ ತಂಡದಿಂದ ಕಾರ್ಯಾಚರಣೆ 14 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ.

 

 

 

ಬೆಳ್ತಂಗಡಿ : ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು   ಸಾಗಿಸುತ್ತಿರುವುದನ್ನು    ಬೆಳ್ತಂಗಡಿ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕ  ಇಂದು ಸಂಜೆ ಪತ್ತೆ ಹಚ್ಚಿ ವಶಕ್ಕೆ ಪಡೆದ   ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ನಡೆದಿದೆ.

 

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಬಸ್ ನಿಲ್ದಾಣದ ಬಳಿ  ಸರಕಾರದಿಂದ ಬಡವರಿಗೆ ಉಚಿತವಾಗಿ ಸಿಗುವ ಪಡಿತರ ಅಕ್ಕಿ ಅಕ್ರಮವಾಗಿ  ಲಾರಿಯಲ್ಲಿ ಸಾಗಿಸುತ್ತಿರುವ ಬಗ್ಗೆ  ಬಂದ್ದ ಮಾಹಿತಿಯಂತೆ  ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಜಂಟಿಯಾಗಿ‌ ಇಂದು ಸಂಜೆ 5 ಗಂಟೆಗೆ ತಪಾಸಣೆ ನಡೆಸಿದಾಗ

ಲಾರಿಯಲ್ಲಿ ಒಟ್ಟು 14 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದ್ದು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬೆಳ್ತಂಗಡಿ ತಹಶೀಲ್ದಾರ್ ಮಹೇಜ್.ಜೆ , ಆಹಾರ ನಿರೀಕ್ಷಕ ವಿಶ್ವ.ಕೆ, ಕೊಕ್ಕಡ ಕಂದಾಯ ನಿರೀಕ್ಷಕ ಪವಡಪ್ಪ ದೊಡ್ಡಮಣಿ,ಕಳಿಯ ಗ್ರಾಮ ಪಂಚಾಯತ್ ಗ್ರಾಮಲೆಕ್ಕಿಗ ಪೃಥ್ವಿರಾಜ್ ಚಾಲಕ ಸಂತೋಷ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

 

ಇದನ್ನೂ ಒದಿ:

 

ಪಡಿತರ ಅಕ್ಕಿ ವಿತರಣೆಯಲ್ಲಿ ಅಕ್ರಮದ ಘಾಟು: ಬಡವರ ಅಕ್ಕಿಯ ತೂಕ ಕಡಿಮೆಗೊಳಿಸಿ ಕನ್ನ!: ಒಟ್ಟು ತೂಕದಲ್ಲಿ ವ್ಯತ್ಯಾಸಗೊಳಿಸಿ‌ ಮೋಸ: ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಬಡ ಜನತೆ:

 

 

error: Content is protected !!