ವಾಣಿಜ್ಯ ಬಳಕೆಯ ಗ್ಯಾಸ್ ದರ ಪರಿಷ್ಕರಣೆ: ಸಿಲಿಂಡರ್ ಒಂದಕ್ಕೆ ₹ 135 ಇಳಿಕೆ:

 

 

 

 

ದೆಹಲಿ: ಕಮರ್ಷಿಯಲ್ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೆ ಪರಿಷ್ಕರಿಸಲಾಗಿದೆ. 19 ಕೆ.ಜಿ ಎಲ್​ಪಿಜಿ ಸಿಲಿಂಡರ್‌ ದರದಲ್ಲಿ ಭಾರಿ ಇಳಿಕೆಯಾಗಿದೆ. ಪ್ರತಿ ಸಿಲಿಂಡರ್​ಗೆ 135 ರೂಪಾಯಿ ಇಳಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಂದಿನಿಂದ 2,219 ರೂಪಾಯಿಗೆ ಮಾರಾಟವಾಗುತ್ತಿದೆ.

ಜೂ 1ರ ಬುಧವಾರ 19 ಕೆ.ಜಿಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 135 ರೂ.ಗಳಷ್ಟು ಇಳಿಸಲಾಗಿದೆ. ಈ ಹಿಂದೆ 2,322 ರೂ.ಗಳಷ್ಟಿದ್ದ ಸಿಲಿಂಡರ್ ಈಗ 2,219 ರೂ. ಆಗಿದೆ. ಇದಕ್ಕೂ ಮುನ್ನ ಮೇ 1ರಂದು 19 ಕೆ.ಜಿ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 102.50 ರೂ ಹೆಚ್ಚಿಸಲಾಗಿತ್ತು. ಈಗ ಮುಂಬೈನಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ 2171.50, ಚೆನ್ನೈನಲ್ಲಿ 2,373 ರೂ.ಗೆ ಮಾರಾಟವಾಗುತ್ತಿದೆ. ಆದರೆ ಗೃಹ ಬಳಕೆ ಸಿಲಿಂಡರ್​ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಹಿಂದಿನ ದರದಲ್ಲೇ ಮಾರಾಟವಾಗುತ್ತಿದೆ.

error: Content is protected !!