ನಾರಾವಿ:ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿದ್ದು , ಈಗಾಗಲೇ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 75 ಸಾವಿರ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಮತ್ತು ಅಭಿವೃದ್ಧಿ ಸಾಧ್ಯ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ , ನ್ಯಾಯವಾದಿ ರಕ್ಷಿತ್ ಶಿವರಾಂ ಹೇಳಿದರು.
ಅವರು ಆದಿತ್ಯವಾರ ನಾರಾವಿ ತುಂಬೆಗುಡ್ಡೆ ಮುನಿರಾಜ್ ಜೈನ್ ಅವರ ಮನೆಯ ವಠಾರದಲ್ಲಿ ಬೆಸ್ಟ್ ಫೌಂಡೇಶನ್ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈಗಾಗಲೇ ಬಡ ಕುಟುಂಬದ ಕೆಲ ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಆ ಮಕ್ಕಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಬೆಸ್ಟ್ ಫೌಂಡೇಶನ್ ಬರಿಸಲಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.
ನಾರಾವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಮಾತನಾಡುತ್ತಾ ಕೇವಲ ಒಂದೇ ವರ್ಷದಲ್ಲಿ ಬೆಸ್ಟ್ ಫೌಂಡೇಶನ್ ಕಾರ್ಯಕ್ರಮಗಳು ತಾಲೂಕಿನ ಜನರ ಶ್ಲಾಘನೆಗೆ ಪಾತ್ರವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ತಾಲೂಕಿನಾದ್ಯಂತ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಣೆಯಿಂದಿಡಿದು ಕಲೆ , ಕ್ರೀಡೆ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ. ಇಂತಹ ಜನಪರ ಕಾರ್ಯಕ್ರಮಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ದಿವಾಕರ ಭಂಡಾರಿ , ನಾರಾವಿ ವಿವಿದೊದ್ದೇಶ ಸಹಕಾರಿ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ , ರಕ್ಷಿತ್ ಶಿವರಾಂ ಅಭಿಮಾನಿ ಬಳಗದ ಅಧ್ಯಕ್ಷ ಮುನಿರಾಜ್ ಜೈನ್ , ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ , ಮಾಜಿ ಸದಸ್ಯ ಸಂತೋಷ್ ಕಾಂತಬೆಟ್ಟು , ಗ್ರಾಮ ಪಂಚಾಯತ್ ಸದಸ್ಯರಾದ ಯಶೋಧ , ಮಲ್ಲಿಕಾ , ಡಯಾನಾ , ಪ್ರಮೀಳಾ , ಬೆಸ್ಟ್ ನಾವರ ಅಧ್ಯಕ್ಷ ರಂಜಿತ್ ನಾವರ ಪ್ರಮುಖರಾದ ಕೃಷ್ಣಪ್ಪ ತುಂಬೆಗುಡ್ಡೆ , ಶೇಖರ್ ತುಂಬೆಗುಡ್ಡೆ , ಕರುಣಾಕರ ಜೈನ್ , ಹರೀಶ್ ಕೊಕ್ರಾಡಿ , ವಿನಯ್ ಲೋಬೋ , ಜಗದೀಶ್ ದಾಸ್ , ಆಲ್ವೀನ್ ರೋಡ್ರಿಗಸ್ ಉದ್ಯಮಿಗಳಾದ ಎಂ.ಕೆ ಆರಿಗ , ಪ್ರಕಾಶ್ ಕೋಟ್ಯಾನ್ , ಚಾರ್ಲಿ ಪಿರೇರಾ ಉಪಸ್ಥಿತರಿದ್ದರು.
ಹರೀಶ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ವಸಂತ್ ಧನಲಕ್ಷ್ಮೀ ಧನ್ಯವಾದವಿತ್ತರು .