ಬಳಂಜ ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಬೋಂಟ್ರೊಟ್ಟು ದೈವಸ್ಥಾನಕ್ಕೆ ಧರ್ಮಸ್ಥಳದಿಂದ ರೂ 2.00 ಲಕ್ಷ ದೇಣಿಗೆ.

 

 

ಅಳದಂಗಡಿ : ಜೀರ್ಣೋದ್ಧಾರ ಗೊಳ್ಳುತ್ತಿರುವ ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಹಪರಿವಾರ ಶಕ್ತಿಗಳ ಕ್ಷೇತ್ರ ಬೋಂಟ್ರೊಟ್ಟು ಬಳಂಜ ಇದರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನೀಡಿರುವ ರೂ 2.00 ಲಕ್ಷ ದೇಣಿಗೆಯ ಚೆಕ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಬೋಂಟ್ರೊಟ್ಟು ಕ್ಷೇತ್ರದ ಟ್ರಸ್ಟ್ ಅರುಣ್ ಹೆಗ್ಡೆಯವರಿಗೆ ಮೇ 27 ರಂದು ಬೋಂಟ್ರೊಟ್ಟು ಕ್ಷೇತ್ರದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಪುಷ್ಪರಾಜ್, ಬೋಂಟ್ರೊಟ್ಟು ಕ್ಷೇತ್ರದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್, ಕ್ಷೇತ್ರದ ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಬೋಂಟ್ರೊಟ್ಟು, ಗಣೇಶ್ ಬೋಂಟ್ರೊಟ್ಟು, ಸದಾನಂದ ಪೂಜಾರಿ ಬೋಂಟ್ರೊಟ್ಟು, ಜಾರಪ್ಪ ಪೂಜಾರಿ ಬೆಳಾಲು, ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಡೀಕಯ್ಯ ಕುಲಾಲ್, ಸೇವಾಪ್ರತಿನಿಧಿ ಸಂಜೀವ ಕೆ, ಪ್ರಮೀಳಾ, ಸ್ಥಳೀಯರಾದ ಹರೀಶ್ ರೈ, ಸುರೇಶ್ ಪೂಜಾರಿ ಹೇವ,ನಿತ್ಯಾನಂದ ಹೆಗ್ಡೆ,ಅಶ್ವಿನ್ ಕುಮಾರ್ ಬಿ.ಕೆ. ಇನ್ನಿತರು ಉಪಸ್ಥಿತರಿದ್ದರು.

error: Content is protected !!