ಚಾರ್ಮಾಡಿಗೆ ತಲುಪಿದ ಡಾ.ಬಿ.ಯಶೋವರ್ಮ ಅವರ ಪಾರ್ಥಿವ ಶರೀರ ಕೆಲವೇ ಕ್ಷಣಗಳಲ್ಲಿ ವಾಹನ ಜಾಥದೊಂದಿಗೆ ಉಜಿರೆಗೆ ಆಗಮನ

 

ಬೆಳ್ತಂಗಡಿ: ಬಾನುವಾರ ಸಿಂಗಾಪುರದಲ್ಲಿ ನಿಧನ ಹೊಂದಿದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.‌ಯಶೋವರ್ಮ ಅವರ ಪಾರ್ಥಿವ ಶರೀರ ಚಾರ್ಮಾಡಿಗೆ ತಲುಪಿದ್ದು ಕೆಲವೇ ಕ್ಷಣಗಳಲ್ಲಿ ಉಜಿರೆ ಬರಲಿದೆ.
ಚಾರ್ಮಾಡಿ ಮತ್ತೂರು ದೇವಸ್ಥಾನದ ವಠಾರದಿಂದ ವಾಹನ ಜಾಥದೊಂದಿಗೆ ಪಾರ್ಥಿವ ಶರೀರದ ಮೆರವಣಿಗೆ ಉಜಿರೆ ಪೇಟೆಗೆ ಬಂದ್ದು ಅಲ್ಲಿಂದ ಪಾದಯಾತ್ರೆಯ ಮೂಲಕ ಉಜಿರೆ ಎಸ್ ಡಿ ಎಂ ಕಾಲೇಜು ಅವರಣಕ್ಕೆ ತರಲಾಗುವುದು.ಕಾಲೇಜಿನ ಒಳಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ನಂತರ ನೀರಚಿಲುಮೆಯ ಅವರ ಸ್ವ ಗೃಹದ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಚಾರ್ಮಾಡಿ ಸುತ್ತಮುತ್ತ ಮಳೆಯಾಗುತಿರುವುದರಿಂದ ಉಜಿರೆ ತಲುಪುವಾಗ ಸ್ವಲ್ಪ ವಿಳಂಭ ಆಗುವ ಸಾಧ್ಯತೆ ಇದೆ  ಎಂದು ತಿಳಿದು ಬಂದಿದೆ.

 

 

 

error: Content is protected !!