ಮಳಲಿ  ಮಸೀದಿ ಬಳಿ ಹಿಂದೂ ದೇವಾಲಯ ಪತ್ತೆ : ತಾಂಬೂಲ ಪ್ರಶ್ನೆಯಲ್ಲಿ ಗುರು ಮಠದ ಸಾನಿಧ್ಯ ಬೆಳಕಿಗೆ: ಜೀರ್ಣೋದ್ದಾರವಾಗದಿದ್ದರೆ ಊರಿಗೆ ಗಂಡಾಂತರ:ಒಟ್ಟಾಗಿ ಸೇರಿ ಪರಿಹರಿಸುವಂತೆ ಸೂಚನೆ:

 

ಮಂಗಳೂರು: ಗಂಜಿಮಠದ ಮಳಲಿ ಎಂಬಲ್ಲಿ ಮಸೀದಿ ನವೀಕರಣದ ಸಂದರ್ಭದಲ್ಲಿ ಪತ್ತೆಯಾದ ದೇವಾಲಯದ ಶೈಲಿಯ ಕುರುಹುಗಳ ಹಿನ್ನೆಲೆಯಲ್ಲಿ ಇಂದು ನಡೆದ ತಾಂಬೂಲ ಪ್ರಶ್ನೆಯಲ್ಲಿ ಗುರುಮಠದ ಸಾನಿಧ್ಯ ಬೆಳಕಿಗೆ ಬಂದಿದ್ದು, ಇದನ್ನು ಒಟ್ಟಾಗಿ ಸೇರಿ ಪರಿಹರಿಸುವಂತೆ ಸೂಚಿಸಲಾಗಿದೆ.

ಇಂದು ತಾಂಬೂಲ ಪ್ರಶ್ನೆ ವಿಹಿಂಪ, ಬಜರಂಗದಳದಿಂದ ಆಯೋಜಿಸಲಾದ ತಾಂಬೂಲ ಪ್ರಶ್ನೆಯನ್ನು ಕೇರಳದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ನಡೆಸಿಕೊಟ್ಟರು. ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ಗುರುಮಠದ ಸಾನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ವಿವಾದದಿಂದ (ಶೈವ/ವೈಷ್ಣವ ವಿವಾದ) ನಾಶವಾಯಿತು. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ನಾಶವಾದಾಗ ಈ ಸ್ಥಳದಲ್ಲಿ ಇದ್ದವರು ಇಲ್ಲಿಂದ ಹೋಗಿದ್ದಾರೆ. ಇಲ್ಲಿಂದ ಮಠವನ್ನು ಸಹ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಆದರೆ, ಅವರು ಪೂರ್ಣವಾಗಿ ಕೊಂಡು ಹೋಗಿಲ್ಲ. ಅರ್ಧ ಸಾನಿಧ್ಯ ಇಲ್ಲಿಯೇ ಉಳಿದಿದೆ.ಇದೀಗ ಈ ಜಾಗದ ಮಾಲಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.

error: Content is protected !!