ಶಿಕ್ಷಣ ತಜ್ಞ ಡಾ. ಬಿ. ಯಶೋವರ್ಮ ನಿಧನ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ಸಂತಾಪ

 

 

ಬೆಳ್ತಂಗಡಿ: ಶಿಕ್ಷಣ ತಜ್ಞ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯಾದರ್ಶಿ ಡಾ.ಬಿ. ಯಶೋವರ್ಮ‌ ನಿಧನಕ್ಕೆ ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿ  ಬೆಳ್ತಂಗಡಿ ಪತ್ರಿಕಾಭವನದಲ್ಲಿ ಅವರಿಗೆ ಶ್ರದ್ಧಾಂಜಲಿ ಮತ್ತು  ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘದ ಹಿರಿಯ ಸದಸ್ಯರಾದ ಆರ್.ಎನ್. ಪೂವಣಿ ನುಡಿ ನಮನ ಸಲ್ಲಿಸಿ ಶಿಸ್ತಿಗೆ ಇನ್ನೊಂದು‌ ಹೆಸರೇ ಡಾ. ಯಶೋವರ್ಮ ಆಗಿದ್ದರು.ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿದ ಅವರು ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ. ಪರಿಸರದ ಹಾಗೂ ಮರ ಗಿಡಗಳ ಬಗ್ಗೆ ಅತೀ ಕಾಳಜಿ ವಹಿಸುತಿದ್ದ ಅವರು ಕಾಲೇಜು ಸುತ್ತಮುತ್ತ ಔಷಧಿಯ ಗಿಡಗಳನ್ನಲ್ಲದೆ ಇತರ ಮರ ಗಿಡಗಳನ್ನು ನೆಟ್ಟು ಪೋಷಿಸುತಿದ್ದರು.  ಯಾವಾಗಲೂ ಎಲ್ಲರೊಂದಿಗೆ ನಗು ಮೊಗದಿಂದಲೇ ಮಾತನಾಡುತ್ತ‌ ಆತ್ಮೀಯತೆಯಿಂದ ಇರುತಿದ್ದರು.

 

 

 

ಸರಳ ಮೃದು ಮನಸ್ಸಿನ ನೇರ ನಡೆ ನುಡಿಯ ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು. ನಂತರ ಸಂಘದ ಅಧ್ಯಕ್ಷ ಧನಕೀರ್ತಿ ಅರಿಗ, ಕಾರ್ಯದರ್ಶಿ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷ ಗಣೇಶ್ ಶಿರ್ಲಾಲು, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಜತೆ ಕಾರ್ಯದರ್ಶಿ ಅಶ್ರಫ್ ಆಲಿ ಕುಂಜ್ಙಿ , ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಸೇರಿದಂತೆ ಸಂಘದ ಎಲ್ಲ ಸದಸ್ಯರು ಅವರ ಆತ್ಮಕ್ಕೆ ಚಿರ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ  ಭಾವ ಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದರು.

error: Content is protected !!