ಯಶೋವರ್ಮ ನಿಧನ ತುಂಬಲಾರದ ನಷ್ಟ ಅಘಾತ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

 

 

 

ಬೆಳ್ತಂಗಡಿ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತೀವ್ರ ಅಘಾತ ವ್ಯಕ್ತಪಡಿಸಿದ್ದಾರೆ
ನಮ್ಮ ಬಂಧು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಆಗಿದ್ದ ಡಾ. ಬಿ. ಯಶೋವರ್ಮನ ಅಕಾಲಿಕ ನಿಧನದಿಂದ ಆಘಾತವಾಗಿದೆ. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಯಶೋವರ್ಮನು ಸ್ನೇಹಜೀವಿ ಹಾಗೂ ಪರಿಶ್ರಮಪಟ್ಟು ಯಾವುದೇ ಕಾರ್ಯವನ್ನು ಮಾಡುತ್ತಿದ್ದ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಗತಿಯಲ್ಲಿ ಅವನ ಅಪಾರ ಶ್ರಮವಿದೆ ಮತ್ತು ಕೊಡುಗೆ ಇದೆ. ಸಮಸ್ಯೆಗಳು ಬಂದಾಗ ಕುಗ್ಗದೆ, ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತವನ್ನು ಕಾಪಾಡಿಕೊಂಡು ಹೋಗುವ ನಿಜವಾದ ಜ್ಞಾನಿಯಾಗಿದ್ದ ಎನ್ನಬಹುದು. ಸಾರ್ವಜನಿಕ ಜೀವನದಲ್ಲಿ ತನ್ನನ್ನು ತೊಡಗಿಸಿಕೊಂಡು ನಗರದ ಸ್ವಚ್ಛತೆ, ಜನತೆಯ ಏಳಿಗೆಗಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅಜಾತಶತ್ರು ಎನಿಸಿಕೊಂಡಿದ್ದಾನೆ.
ಆತನ ನಿಧನ ನಮ್ಮ ಕುಟುಂಬಕ್ಕೂ, ಕ್ಷೇತ್ರಕ್ಕೂ ಎಲ್ಲಾ ಸಂಸ್ಥೆಗಳಿಗೂ ತುಂಬಲಾರದ ನಷ್ಟವಾಗಿದೆ. ಆತನ ಆತ್ಮಶಾಂತಿಗಾಗಿ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಂಬನಿ‌ ಮಿಡಿದಿದ್ದಾರೆ.

error: Content is protected !!