ಡಾ. ಯಶೋವರ್ಮ ಪಾರ್ಥಿವ ಶರೀರ ನಾಳೆ ಉಜಿರೆಗೆ ಚಾರ್ಮಾಡಿಯಿಂದ ಉಜಿರೆಗೆ ವಾಹನ ಜಾಥದೊಂದಿಗೆ ಮೆರವಣಿಗೆ ಉಜಿರೆ ಪೇಟೆಯಿಂದ ಕಾಲೇಜು ತನಕ ಪಾದಯಾತ್ರೆಯ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ಕಾಲೇಜು ಅವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

 

 

 

 

ಬೆಳ್ತಂಗಡಿ:   ಅನಾರೋಗ್ಯದಿಂದ ಸಿಂಗಾಪುರದಲ್ಲಿ ನಿಧನ ಹೊಂದಿದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಡಾ.ಬಿ. ಯಶೋವರ್ಮ ಅವರ ಮೃತ ದೇಹ ನಾಳೆ ಬೆಳ್ತಂಗಡಿಗೆ ತಲುಪಲಿದ್ದು

 

 

ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಅಂಬುಲೆನ್ಸ್ ಮೂಲಕ ಮಧ್ಯಾಹ್ನ 1 ಗಂಟೆಗೆ ಚಾರ್ಮಾಡಿಗೆ ಬರಲಿದೆ ಅಲ್ಲಿಂದ ವಾಹನ ಜಾಥದೊಂದಿಗೆ ಪಾರ್ಥಿವ ಶರೀರದ ಮೆರವಣಿಗೆ ಉಜಿರೆ ಪೇಟೆಗೆ ಬಂದ್ದು ಅಲ್ಲಿಂದ ಪಾದಯಾತ್ರೆಯ ಮೂಲಕ ಉಜಿರೆ ಎಸ್ ಡಿ ಎಂ ಕಾಲೇಜಿಗೆ ಬಂದ್ದು  ಒಳಾಂಗಣದಲ್ಲಿ‌‌ ಸಂಜೆ‌ 5.30  ಗಂಟೆಯವರೆಗೆ   ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಮಧ್ಯಾಹ್ನ 12 ಗಂಟೆಯ ನಂತರ ಉಜಿರೆ ಪೇಟೆಯ ಎಲ್ಲಾ ವರ್ತಕರು ಅಂಗಡಿ ಮುಂಗಟ್ಟುಗಳನ್ನು   ಬಂದ್  ಮಾಡುವ ಮೂಲಕ   ಶೋಕಾಚರಣೆ ಆಚರಿಸಿ ಗೌರವ ಸಲ್ಲಿಸಲಿದ್ದಾರೆ.

error: Content is protected !!