ಬೆಳ್ತಂಗಡಿ ದಯಾ ವಿಶೇಷ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ

 

 

ಬೆಳ್ತಂಗಡಿ: 2021-2022ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಯಾ ವಿಶೇಷ ಶಾಲೆಯ 6 ಮಂದಿ ವಿದ್ಯಾರ್ಥಿಗಳಾದ ಚೇತನಾ, ದೀಕ್ಷಾ, ಶಶಿಕಾಂತ್, ಶಪೀಲ್, ಮೋಕ್ಷಿತ್ ಹಾಗೂ ಪುನೀತ್‍ರಾಜ್ ಇವರುಗಳು ಪರೀಕ್ಷೆಯನ್ನು ಬರೆದಿದ್ದು ಪರೀಕ್ಷೆಯಲ್ಲಿ 04 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೆಯೇ ಈ ಮಕ್ಕಳಿಗೆ ಕಳೆದ ಒಂದು ವರ್ಷದಿಂದ ಶಿಕ್ಷಕರು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಬೇಕಾದ ಪೂರ್ವ ತಯಾರಿಯನ್ನು ನಡೆಸಿದ್ದು ಕೋವಿಡ್ ಸಮಯದಲ್ಲಿಯೂ ಮಕ್ಕಳಿಗೆ ಬೇಕಾದ ಪಠ್ಯ ಪುಸ್ತಕಗಳು ಹಾಗೂ ಕಲಿಕಾ ಸಾಮಾಗ್ರಿಗಳನ್ನು ಒದಗಿಸಿ ತರಬೇತಿಯನ್ನು ನೀಡುತ್ತ ಬಂದಿದ್ದಾರೆ. ಈ ಮಕ್ಕಳು ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆಯನ್ನು ಬರೆದಿದ್ದು ಮಕ್ಕಳಿಗೆ ವಾಹನ ಮತ್ತು ಊಟದ ವ್ಯವಸ್ಥೆಯನ್ನು ಸಂಸ್ಥೆಯು ಮಾಡಿರುತ್ತಾದೆ. ಪ್ರಸ್ತುತ ವರ್ಷದಲ್ಲಿ 12 ಮಂದಿಯನ್ನು ಪರೀಕ್ಷೆಗೆ ಕೂರಿಸುವ ಆಲೋಚನೆಯಿದ್ದು ಅದಕ್ಕೆ ಬೇಕಾದ ಕಲಿಕೆ ಹಾಗೂ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕರು ಹಾಗೂ ಸಂಚಾಲಕರು ಆಗಿರುವ ವಂ|ಫಾ.ವಿನೋದ್ ಮಸ್ಕರೇನ್ಹಸ್ ರವರು ತಿಳಿಸಿದ್ದಾರೆ. ಹಾಗೆಯೇ ಉತ್ತೀರ್ಣರಾದ ಮಕ್ಕಳು ಹಾಗೂ ಅವರ ಹಿಂದೆ ಶ್ರಮವಹಿಸಿದ ಎಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿದರು.

error: Content is protected !!