ಬೆಳ್ತಂಗಡಿ:ಉಜಿರೆ ಗ್ರಾಮದ ಗುರಿಪಳ್ಳ ರಸ್ತೆಯ ಹಲಕ್ಕೆ ಎಂಬಲ್ಲಿ ನಿವೇಶನದ ವಿಚಾರವಾಗಿ ಗಲಾಟೆ ಮಾಡಲು ಬಂದ ದುಷ್ಕರ್ಮಿಗಳ ಗುಂಪು, ಸಾರ್ವಜನಿಕರು ಓಡಾಡುವ ಉಜಿರೆ ಗುರಿಪಳ್ಳ ಡಾಮರ್ ರಸ್ತೆಯಲ್ಲಿಯೇ ಸಾರ್ವಜನಿಕರ ಎದುರು ಓರ್ವ ಯುವತಿಯ ಬಟ್ಟೆ ಹರಿದು ಬೆತ್ತಲೆಗೊಳಿಸಿ ಅವಮಾನಿಸಿರುವುದು ಖಂಡನೀಯ ಈ ಬಗ್ಗೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಸಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು ಅವರು ಗುರುನಾರಾಯಣ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಜಿರೆಯಲ್ಲಿ ಮಹಿಳಾ ದೌರ್ಜನ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಮಹಿಳೆಯರಿಗೆ ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು ಹಾಗೂ ಅವರಿಗೆ ಮೂರು ಕುಟುಂಬಗಳಿಗೆ ಸರಕಾರವೇ ಹೊಸ ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿ ಇದೇ ಬರುವ ಮೇ 09ನೇ ತಾರೀಕು ಸೋಮವಾರದಿಂದ ಬೆಳಿಗ್ಗೆ 10 ಗಂಟೆಯಿಂದ ಮಿನಿ ವಿಧಾನ ಸೌಧದ ಎದುರು ಅನಿರ್ಧಿಷ್ಟ ಕಾಲ ದರಣಿ ನಡೆಸಲು ನಮ್ಮ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ತೀರ್ಮಾನಿಸಿವೆ .ಯುವತಿಯ ಮಾನ ಹಾನಿ ಮಾಡಿದ್ದನ್ನು ಸೌಜನ್ಯಕ್ಕಾದರೂ ಖಂಡಿಸದ ಹಾಗೂ ಮಹಿಳೆಗೆ ಸಾಂತ್ವನ ಹೇಳದ ದೂರು ದಾಖಲಾಗಿ 10 ದಿನ ಕಳೆದರೂ ಆರೋಪಿಗಳ ಬಂಧನಕ್ಕೆ ಆಗ್ರಹಿಸದ ಬೆಳ್ತಂಗಡಿಯ ಶಾಸಕರ ನಡೆ ಕೂಡ ಹಿಂದೂ ವಿರೋಧಿ , ಮಹಿಳಾ ವಿರೋದಿ, ನಡೆಯಾಗಿದ್ದು ಖಂಡನೀಯವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್, ಕಮ್ಯೂನಿಸ್ಟ್ ನಾಯಕ ಬಿ.ಎಂ. ಭಟ್, ಹಾಗೂ ಇತರರು ಉಪಸ್ಥಿತರಿದ್ದರು.