ಬೆಳ್ತಂಗಡಿ:ಮುಹಿಯುದ್ದೀನ್ ಜುಮ್ಮಾ ಮಸೀದಿ ಉಜಿರೆಯಲ್ಲಿ ಜ. ಅಬೂಸಾಲಿಹ್ ಸಖಾಫಿ ರವರ ನೇತೃತ್ವದಲ್ಲಿ “ಈದ್ ಉಲ್ ಫಿತ್ರ್ ” ಸಾಮೂಹಿಕ ಪ್ರಾರ್ಥನೆ ನಡೆಯಿತು.
ಪ್ರಸಕ್ತ ಸನ್ನಿವೇಷದಲ್ಲಿ ದೇಶದಾದ್ಯಂತ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಉಸ್ತಾದರು ಈ ಬಗ್ಗೆ ಸರಕಾರ ಗಂಭೀರವಾಗಿ ಚರ್ಚಿಸಿ ಅಲ್ಪಸಂಖ್ಯಾತರ ರಕ್ಷಣೆ ಯನ್ನು ಖಾತ್ರಿಪಡಿಸಬೇಕೆಂದು ಕರೆ ಕೊಟ್ಟರು.
ತ್ಯಾಗ, ಬಲಿದಾನ ಹಾಗೂ ಸಮರ್ಪಣೆಯ ಸಂಕೇತವಾದ ಈದ್ ಉಲ್ ಫಿತ್ರ್ ನಾಡಿನ ಸರ್ವ ಧರ್ಮಿಯರ ಸೌಹಾರ್ದವನ್ನು ಬೆಳೆಸಲಿ, ಪರಸ್ಪರ ಪ್ರೀತಿಯನ್ನು ಸಾರಲಿ ಎಂದು ಪ್ರಾರ್ಥಿಸಿದರು.
ಮಸೀದಿಯ ಅಧ್ಯಕ್ಷ ಜ. ಹಾಜಿ ಬಿ. ಎಂ. ಅಬ್ದುಲ್ ಹಮೀದ್ ಸೇರಿದಂತೆ ಆಡಳಿತ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.