ಬೆಳ್ತಂಗಡಿ; ವಿಶ್ವ ಜ್ಞಾನದ ಸಂಕೇತ, ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 131 ನೆಯ ಜನ್ಮದಿನಾಚರಣೆ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವು ಮೇ 1 ರಂದು ಕೊಯ್ಯೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು ತಿಳಿಸಿದ್ದಾರೆ.
ಬೆಳ್ತಂಗಡಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವು ಮೇ 1 ರಂದು ಬೆಳಗ್ಗೆ 10 ಘಂಟೆಗೆ ಶ್ರೀ ಪಂಚದುರ್ಗಾ ಸಹಕಾರಿ ಸಭಾಭವನ ಆದೂರುಪೆರಾಲ್ ಕೊಯ್ಯೂರು ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ನಾಡಿನ ಚಿಂತಕ, ಪ್ರಗತಿಪರ ಸ್ವಾಮೀಜಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಭೀಮಾ ರಮಾ ಯುವ ವೇದಿಕೆ ಕೊಯ್ಯೂರು ಅಧ್ಯಕ್ಷ ಪ್ರತೀಶ್ ಬಿ ಕೊಯ್ಯೂರು ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ & ಸತ್ರ ನ್ಯಾಯಾಲಯದ ಹಿರಿಯ ಸಹಾಯಕ ಅಭಿಯೋಜಕರಾದ ವಿನಯರಾಣಿ, ಬೆಸ್ಟ್ ಫೌಂಡೇಶನ್ (ರಿ) ಬೆಳ್ತಂಗಡಿ ಅಧ್ಯಕ್ಷ, ರಾಜ್ಯ ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ, ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ, ವಿಮುಕ್ತಿ ಸಂಸ್ಥೆ ದಯಾಳ್ ಬಾಗ್ ನಿರ್ದೇಶಕ ವಂದನೀಯ ಫಾ||ವಿನೋದ್ ಮಸ್ಕರೇನ್ಹಸ್, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5 ಗಂಟೆಯಿಂದ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಜೈಭೀಮ್ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಅಂಬೇಡ್ಕರ್ ಜಯಂತಿ ಕೇವಲ ಸಭಾ ಕಾರ್ಯಕ್ರಮಕ್ಕೆ ಸೀಮಿತಗೊಳ್ಳದೆ ಊರಿನ ಜಾತ್ರೆಯಂತೆ ಹೊಸ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ
ವೆಂಕಣ್ಣ ಕೊಯ್ಯೂರು, ಜಿಲ್ಲಾ ಕಾರ್ಯಕಾರಿ ಸದಸ್ಯರು, ದ.ಸಂ.ಸ.ಅಂಬೇಡ್ಕರ್ ವಾದ, ಜಿಲ್ಲಾ ಶಾಖೆ ಮಂಗಳೂರು
ಪ್ರತೀಶ್ ಬಿ., ಅಧ್ಯಕ್ಷರು ಭೀಮ್ ರಮಾ ಯುವ ವೇದಿಕೆ ಕೊಯ್ಯೂರು
ನಿತೇಶ್ ಕೆ.ವಿ, ಕೋಶಾಧಿಕಾರಿ ಭೀಮ್ ರಮಾ ಯುವ ವೇದಿಕೆ ಕೊಯ್ಯೂರು
ತಿಲಕ್ ನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ಭೀಮ್ ರಮಾ ಯುವ ವೇದಿಕೆ ಕೊಯ್ಯೂರು ಇವರು ಉಪಸ್ಥಿತರಿದ್ದರು.