ಬೆಳ್ತಂಗಡಿ ಹಳೇಕೋಟೆ ಬಳಿ ಕಾರು ಗೂಡ್ಸ್ ರಿಕ್ಷಾ ಡಿಕ್ಕಿ

 

 

 

ಬೆಳ್ತಂಗಡಿ: ಕಾರೊಂದು ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿ ತಾಲೂಕಿನ ಹಳೆಕೋಟೆ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಬರುತಿದ್ದ ಕಾರು ಬೆಳ್ತಂಗಡಿಯಿಂದ ಅಳದಂಡಿಗೆ ಹೋಗುತಿದ್ದ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ .ಡಿಕ್ಕಿಯ ರಭಸಕ್ಕೆ ಗೂಡ್ಸ್ ರಿಕ್ಷಾ ಜಖಂ ಗೊಂಡಿದ್ದು ಅದರಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ತಡೆಯಾಗಿದ್ದು ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

error: Content is protected !!