ನೇತ್ರಾವತಿ ಬಳಿ‌ ಬೈಕಿಗೆ ಕಾರು ಡಿಕ್ಕಿ ಧರ್ಮಸ್ಥಳ ಠಾಣೆಯ  ಪೊಲೀಸರಿಬ್ಬರಿಗೆ ಗಾಯ

 

 

 

ಬೆಳ್ತಂಗಡಿ: ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಧರ್ಮಸ್ಥಳ ಠಾಣೆಯ ಪೊಲೀಸರಿಬ್ಬರು ಗಾಯಗೊಂಡ ಘಟನೆ ನಡೆದಿದೆ.
ಧರ್ಮಸ್ಥಳ ಠಾಣೆಯ ಇಬ್ಬರು ಪೊಲೀಸರು ಧರ್ಮಸ್ಥಳ ಕಡೆಯಿಂದ ಉಜಿರೆಗೆ ತೆರಳುತ್ತಿರುವ ಸಂದರ್ಭ ಧರ್ಮಸ್ಥಳದ ನೇತ್ರಾವತಿ ಬಳಿ ತಿರುವಿನಲ್ಲಿ ವೇಗವಾಗಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು ಬೈಕಿನಲ್ಲಿದ್ದ ಪೊಲೀಸರಿಬ್ಬರಿಗೂ ಗಾಯಗಳಾಗಿದ್ದು ಒಬ್ಬರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ ತಕ್ಷಣ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

error: Content is protected !!