ಕಕ್ಕಿಂಜೆ‌ ಮನೆ ಬಾಗಿಲು ಮುರಿದು ನಗದು ಸಹಿತ ಚಿನ್ನಾಭರಣ ಕಳವು

 

 

 

 

ಬೆಳ್ತಂಗಡಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲು ಮುರಿದು ಕಳ್ಳರು ನುಗ್ಗಿ ಮನೆಯಲ್ಲಿದ್ದ ಕಪಾಟು ಮುರಿದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ ಮಾಡಿದ ಘಟನೆ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಕತ್ತರಿಗುಡ್ಡೆ ನಿವಾಸಿ ಇಕ್ಬಾಲ್ ಎಂಬವರಿಗೆ ಸೇರಿದ ಮನೆಯಲ್ಲಿ ತಂಗಿ ಝರಿನಾ ಮತ್ತು ಇಬ್ಬರು ಮಕ್ಕಳು ಮಾತ್ರ ವಾಸವಾಗಿರುವುದು ಗಂಡ ಇಸ್ಮಾಯಿಲ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ,‌ ಝರಿನಾ ಮತ್ತು ಮಕ್ಕಳು ಮೂರು ದಿನಗಳ ಹಿಂದೆ ತವರು ಮನೆ ಬದ್ಯಾರಿಗೆ ಹೋಗಿದ್ದರು ಇದನ್ನು ಅರಿತ ಕಳ್ಳರು ಭಾನುವಾರ ರಾತ್ರಿ ಹಿಂಬಾಗಿಲು ಮುರಿದು ಒಳನುಗ್ಗಿ ಕಪಾಟು ಒಡೆದು ಎರಡು ಪವನ್ ಚಿನ್ನ ಮತ್ತು ಸುಮಾರು 16,000 ಹಣ ಕಳ್ಳತನ ಮಾಡಿದ್ದಾರೆ , ಮನೆಯಲ್ಲಿದ್ದ ಬಟ್ಟೆ ಹಾಗೂ ದಾಖಲೆಗಳನ್ನು ಚೆಲ್ಲಪಿಲ್ಲಿ ಮಾಡಿ ಹುಡುಕಾಟ ನಡೆಸಿದ್ದಾರೆ‌. ಸೋಮವಾರ ಬೆಳಿಗ್ಗೆ ಇಕ್ಬಾಲ್ ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ ಕೃತ್ಯವನ್ನು ಸ್ಥಳೀಯರು ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!