ಕೊಕ್ಕಡ ಭಗವಾಧ್ವಜ ಹಾನಿಗೈದ ಪ್ರಕರಣ ಭಗವಾಧ್ವಜ ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ: ಇಂತಹ ಪ್ರಕರಣ ಮರುಕಳಿಸಿದರೆ ಪರಿಣಾಮ ಸರಿ ಇರಲ್ಲ ಹಾನಿಗೈದ ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ ಶಾಸಕ ಹರೀಶ್ ಪೂಂಜ

 

 

 

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್‌ನಲ್ಲಿದ್ದ ಭಗವಾಧ್ವಜ ಕಟ್ಟೆಗೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ನಡೆದಿದೆ. ಕಿಡಿಗೇಡಿಗಳು ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿದ್ದಾರೆ.

ಕೊಕ್ಕಡದಿಂದ ಪಟ್ರಮೆಗೆ ತೆರಳುವ ಮಾರ್ಗದಲ್ಲಿರುವ ಉಪ್ಪಾರಪಳಿಕೆ ಜಂಕ್ಷನ್‌ ಬಳಿ ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಅದರಲ್ಲಿ ಕೇಸರಿ ಧ್ವಜ ಪ್ರತಿಷ್ಠಾಪಿಸಿದ್ದರು. ಆದರೆ ಶನಿವಾರ ರಾತ್ರಿ ಈ ಭಗವಾಧ್ವಜ ಹಾಗೂ ಅದರ ಕಂಬ ಬುಡ ಸಮೇತ ಮುರಿದು ರಸ್ತೆಗೆ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಇದೊಂದು ಉದ್ದೇಶಪೂರ್ವಕ ಕೃತ್ಯವೆಂದು ಆರೋಪಿಸಿದ್ದಾರೆ.
ಈ ಕೃತ್ಯವನ್ನು ಖಂಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
ಭಗವಾಧ್ವಜವು ಹಿಂದುಗಳ ಶಕ್ತಿ ಮತ್ತು ಪ್ರೇರಣೆಯ ಸಂಕೇತ. ಮಾತ್ರವಲ್ಲದೆ ನಮ್ಮ ಹೃದಯದಲ್ಲಿ ಅದಕ್ಕೆ ಆರಾಧನೆಯ ಸ್ಥಾನವನ್ನು ನೀಡಿದೆ. ಹಾಗಾಗಿ ಮತ್ತದೇ ಹಾಳುಗೆಡಹಿದ ಜಾಗದಲ್ಲಿ ಭಗವಾಧ್ವಜವನ್ನು ಹಾರಾಡುವಂತೆ ಮಾಡುವುದಾಗಿ ಹೇಳಿದರು. ಅಲ್ಲದೆ ಇನ್ನು ಮುಂದೆ ಇಂತಹ ದುಷ್ಕೃತ್ಯ ಮರುಕಳಿಸಿದರೆ ಪರಿಣಾಮ ಬೇರೆ ರೀತಿಯೇ ಆಗಿರುತ್ತದೆ. ಎಂದು ಕಿಡಿಗೇಡಿಗಳಿಗೆ ಈ ಸಂದರ್ಭ ಎಚ್ಚರಿಕೆ ನೀಡಿದರು.ಅದಲ್ಲದೇ ಕೃತ್ಯ ಎಸಗಿದವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು.

error: Content is protected !!