
ಬೆಳ್ತಂಗಡಿ: ಭೂಮಿಯನ್ನು ಅಗೆದು ನಿಧಿ ಶೋಧ ನಡೆಸಿದ ಘಟನೆ ಸವಣಾಲು ಸಮೀಪ ನಡೆದಿದೆ. ಸವಣಾಲು ಕೆರೆಕೋಡಿ ರಾಜೇಶ್ ಎಂಬವರ ಜಾಗದಲ್ಲಿ ಯಾರೋ ಅಪರಿಚಿತರು ವಾಮಾಚಾರ ನಡೆಸಿ ಭೂಮಿಯನ್ನು ಅಗೆದು ನಿಧಿ ಹುಡುಕಾಟ ನಡೆಸಿರುವ ಬಗ್ಗೆ ಕುರುಹುಗಳು ಕಂಡುಬಂದಿದೆ.

ಸ್ಥಳೀಯ ವ್ಯಕ್ತಿಯೊಬ್ಬರು ಗಮನಿಸಿ ರಾಜೇಶ್ ಅವರಿಗೆ ಮಾಹಿತಿ ನೀಡಿದ್ದಾರೆ ಅವರು ಹೋಗಿ ಪರಿಶೀಲಿಸಿದಾಗ ಬಾಟಲಿಗಳು ಕುಂಕುಮ ತೆಂಗಿನ ಕಾಯಿ ಸೇರಿದಂತೆ ಗಿಡವೊಂದರಲ್ಲಿ ಕುಂಕುಮ ಮಿಶ್ರಿತ ಲಿಂಬೆ ಹಣ್ಣನ್ನು ಕಟ್ಟಿದ್ದು ಸುಮಾರು 5ಅಡಿ ಆಳವಾದ ಗುಂಡಿಯನ್ನು ಅಗೆದು ಹುಡುಕಾಟ ನಡೆಸಿದ ಕುರುಹುಗಳು ಕಂಡುಬಂದಿದೆ.

ಯಾರೋ ಅಪರಿಚಿತರು ನಿಧಿ ಇದೆ ಎನ್ನುವ ಸಂಶಯದಲ್ಲಿ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ರಾಜೇಶ್ ಅವರು ದೂರು ನೀಡಿದ್ದಾರೆ.