ತಾಲೂಕಿನ ಮಲಯಾಳಿ ಭಾಷಿಗರಿಗೂ ಪಕ್ಷದಲ್ಲಿ ಹೆಚ್ಚಿನ ಪ್ರಾಧಾನ್ಯತೆ: ಶಾಸಕ ಹರೀಶ್ ಪೂಂಜ ಉಜಿರೆಯಲ್ಲಿ ವಿಷು ಕಣಿ ಆಚರಣೆ

 

 

 

 

ಬೆಳ್ತಂಗಡಿ, : ದೇಶದಲ್ಲಿ 58 ಸಾವಿರಕ್ಕೂ ಅಧಿಕ ತಾಲೂಕಿಗಳಿದ್ದು ಪ್ರತಿ ತಾಲೂಕಿನ ಭಾಷೆ, ಆಚರಣೆ ವಿಭಿನ್ನ. ಅದಕ್ಕೆ ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಂಪರೆಯಾಗಿದೆ ಎಂದು ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಶ್ರಮಿಕ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಇರುವ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.16 ರಂದು ಕೇರಳ ಸಾಂಪ್ರದಾಯಿಕ ವಿಷು ಕಣಿ ಉತ್ಸವವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

 

 

 

ಮನಸ್ಸು ಹೃದಯ ಮುಟ್ಟುವ ಕಾರ್ಯಕ್ರಮವಾಗಿ ಶಾಸಕ ಹರೀಶ್ ಪೂಂಜ ವಿಭಿನ್ನ ಚಿಂತನೆಯ ಮೂಲಕ ವಿಷು ಹಬ್ಬ ವಿಶೇಷ ಸಂಭ್ರಮಕ್ಕೆ ಸಾಕ್ಷೀಕರಿಸಿದ್ದಾರೆ ಎಂದರು.

 

 

 

ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಮಕ್ಕೆ ಇನ್ನೊಂದು ಅನ್ವರ್ಥನಾಮ ಮಳಿಯಾಳಿಗರು. ಸರಿಸುಮಾರು ನೂರು ವರ್ಷದ ಆಸುಪಾಸಿನಲ್ಲಿ ಕೇರಳದಿಂದ ಬೆಳ್ತಂಗಡಿಗೆ ಬಂದು ಶ್ರಮ ಜೀವಿಗಳಾಗಿ ಕೃಷಿಯೊಂದಿಗೆ ಬದುಕು ಕಟ್ಟಿಕೊಂಡ ಮಳಿಯಾಳಿ ಭಾಷಿಗರು ಮನೆಯಲ್ಲಿ ಆಚರಿಸುವ ಹಬ್ಬವನ್ನು ಇಂದು ಸಾಮೂಹಿಕವಾಗಿ ಆಚರಿಸಿದ್ದೇವೆ. ಈ ಮೂಲಕ ತುಳು ಮತ್ತು ಮಳಿಯಾಳಿ ಭಾಷಿಗರು ಒಂದೇ ಎಂಬ ಭಾವನೆ ಈ ಹಬ್ಬದಲ್ಲಿ ಮೂಡಿಬಂದಿದೆ ಮುಂದಿನ ದಿನಗಳಲ್ಲಿ ಮಲಯಾಳ ಭಾಷಿಗರಿಗೂ ತಾಲೂಕು ಬಿಜೆಪಿಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡುವ ಬಗ್ಗೆ ಮಂಡಲ ಅಧ್ಯಕ್ಷರ ಸಹಕಾರದಲ್ಲಿ ಚಿಂತಿಸಲಾಗುವುದು ಎಂದರು.

 

ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ ಶ್ರೀಧರ್ ಶುಭಹಾರೈಸಿದರು.ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವಿಷು ಕಣಿ ಸಮಿತಿ ಅಧ್ಯಕ್ಷ ಅನಿಲ್ ಶಿಬಾಜೆ, ಎಸ್.ಎನ್.ಡಿ.ಪಿ. ಯೂನಿಯನ್ ಮಂಡಲ ಸದಸ್ಯ ಉಣ್ಣಿ ಕೃಷ್ಣನ್, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಚಾರ್ಮಾಡಿ, ತೋಟತ್ತಾಡಿ ಹಾ.ಉ.ಸಂಘದ ಉಪಾಧ್ಯಕ್ಷೆ ಪ್ರಮೀಳಾ, ನೆರಿಯಾ ಹಾ.ಉ.ಸ.ಸಂಘದ ನಿರ್ದೇಶಕ ಶೋಭ ಪ್ರೇಮರಾಜ್, ಪುದುವೆಟ್ಟು ಗ್ರಾ.ಪಂ. ಸದಸ್ಯ ರಾಮೇಂದ್ರನ್, ನೆರಿಯಾ ಗ್ರಾ.ಪಂ. ಸದಸ್ಯ ದಿನೇಶ್ ಉಪಸ್ಥಿತರಿದ್ದರು.

 

ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಅರ್ಚನಾ ಎಸ್., ಮಾಜಿ ಸೈನಿಕರಾದ ರವಿ ಪ್ರಸಾದ್, ಪುರುಷೋತ್ತಮ ಶಿಬಾಜೆ, ಬ್ರದರ್ ಬೇಕರಿ ಸ್ಥಾಪಕ ರಾಜೇಂದ್ರ ನಾಯರ್, ನಿವೃತ್ತ ಶಿಕ್ಷಕ ಶ್ರೀಧರ್ ಮಾಸ್ಟರ್,
ಎಸ್.ಎನ್.ಡಿ.ಪಿ. ಯೂನಿಯನ್ ಹಿರಿಯರಾದ ಕೆ.ಜಿ. ಮುರಳೀಧರ, ಹಿರಿಯರಾದ ವೇಲು ಟಿ.ಎನ್., ಶೈಲಜಾ ರಾಜೇಶ್ ಹೊಸಮಠ ಅವರನ್ನು ಸಮ್ಮಾನಿಸಲಾಯಿತು.

 

 

 

ವಿಷು ಕಣಿ ಪ್ರಯುಕ್ತ ವಿಶೇಷವಾಗಿ ಸಂಗರಿಸಿದ ಫಲ ಹಾಗೂ ಪುಷ್ಪವನ್ನು ದೇವರಿಗೆ ಇಟ್ಟು ನೆಕ್ಕರೆಯ ವತ್ಸ ಮತ್ತು ಬಳಗದಿಂದ ತಿರುವಾದಿರ ಸಾಂಸ್ಕೃತಿಕ
ನೃತ್ಯ ಪ್ರದರ್ಶಿಸಲಾಯಿತು. ಬಳಿಕ ರಾಜ್ಯ ಪ್ರಶ್ತಿ ವಿಜೇತೆ ಅರ್ಚನಾ ಎಸ್. ಹಾಗೂ ಅನಘಾ ಮತ್ತು ಅನನ್ಯಾ ಅವರಿಂದ ನೃತ್ಯ ಪ್ರದರ್ಶನ ರಾಜೇಶ್ ಕಡವಂದ್ರ ಸಾರಥ್ಯದಲ್ಲಿ ಉಗ್ರಂ ಉಜ್ವಲಂ ಮೆಗಾ ಶೋ ಸಹಿತ ಪೂಕಳಂ ಮನೋರಂಜನಾ ಕಾರ್ಯಕ್ರಮ ಆಕರ್ಷಕವಾಗಿತ್ತು. ಕೇರಳ ಮಾದರಿಯ ಸುಮಾರು 22 ಕ್ಕಿಂತಲೂ ಅಧಿಕ ಬಗೆಯ ವಿವಿಧ ಆಹಾರ ಖಾದ್ಯಗಳ ಬಾಳೆಲೆಯ ಊಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು .

error: Content is protected !!