ಬಸ್ಸ್ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ ಚಾರ್ಮಾಡಿ ಸಮೀಪ ನಡೆದ ಘಟನೆ

 

ಬೆಳ್ತಂಗಡಿ : ಚಾರ್ಮಾಡಿ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಕಾರಿಗೆ ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿದ್ದವರು ಹುಬ್ಬಳಿ ಮೂಲದವರು ಎನ್ನಲಾಗಿದೆ ರಜೆ ಇದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇತರ ದೇವಸ್ಥಾನಗಳಿಗೆ ಭೇಟಿ ನೀಡಿ ವಾಪಸ್ ಊರಿನ ಕಡೆ ಹೋಗುತ್ತಿದ್ದಾಗ ಚಾರ್ಮಾಡಿ ಗ್ರಾಮದ ಗೋಳಿಕಟ್ಟೆಯಲ್ಲಿ ಮೂಡಿಗೆರೆಯಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ ಈ ವೇಳೆ ಕಾರು ಸಂಪೂರ್ಣ ಜಖಂಗೊಂಡಿದ್ದು ,ಬಸ್ ಚರಂಡಿಗೆ ಹೋಗಿದೆ, ಕಾರಿನಲ್ಲಿದ್ದ ಮೂವರಾದ ಚಾಲಕ ಪ್ರತೀಕ್(30) ರಾಜೇಶ್ ಬೆಳ್ಳಿವರಿ(44) ,ಸ್ವಂತಿಕಾ ಬೆಳ್ಳಿವರಿ(35) ಎಂಬವರಿಗೆ ಗಾಯವಾಗಿದ್ದು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.

error: Content is protected !!