ಬೆಳ್ತಂಗಡಿ : ವಿವಿಧತೆಯಲ್ಲಿ ಏಕತೆಯನ್ನು ಆಚರಿಸುವ ಭಾರತೀಯ ಸಂಸ್ಕೃತಿಗೆ ಮೆರುಗು ನೀಡುವಂತೆ ಕೇರಳ ಮೂಲದ ನಮ್ಮ ತಾಲೂಕಿನ ಬಂಧುಗಳಿಗೆ ಕೇರಳ ಸಾಂಪ್ರದಾಯಕ ವಿಷು ಕಣಿ ಉತ್ಸವವನ್ನು ಸೌರಮಾನದ ಹೊಸವರ್ಷ ನಾಡಿಗೆ ಒಳಿತಾಗಲಿ ಎಂಬ ಸದಾಶಯದೊಂದಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎಪ್ರಿಲ್ 16 ಶನಿವಾರ ಶ್ರಮಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಆಯೋಜಿಸಲಾಗಿದೆ.
ತುಳು ಮತ್ತು ಮಲಯಾಳಂಗಳಲ್ಲಿ ಭವಿಷ್ಯ, ಶ್ರೇಯಸ್ಸು, ಶಕುನ ಎಂಬ ಅರ್ಥವಿರುವ ಈ ಕಣಿ ಹಬ್ಬವು ಹಲವಾರು ಹೂವಿನ ವಿವಿಧ ವಿನ್ಯಾಸದ ರಂಗೋಲಿಯ ಪೂಕಳಂ ಸೇರಿದಂತೆ ಸನ್ಮಾನ ಹಾಗೂ ಮನೋರಂಜನೆ ಕಾರ್ಯಕ್ರಮಗಳು ನಡೆಯುವ ಈ ಉತ್ಸವದಲ್ಲಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದು ತಾಲೂಕಿನ ಜನತೆ ಈ ಸಾಂಪ್ರದಾಯಕ ಉತ್ಸವದಲ್ಲಿ ಭಾಗವಹಿಸಬೇಕೆಂದು ಶ್ರಮಿಕ ಸೇವಾ ಟ್ರಸ್ಟ್‌ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.