ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ

 

 

 

 

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್​ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಂದು ಮಾಧ್ಯಮಗೋಷ್ಠಿ ನಡೆಸಿದ ಈಶ್ವರಪ್ಪ ನಾಳೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ನಾಳೆ ಸಂಜೆ ಬೆಂಗಳೂರಿಗೆ ತೆರಳಿ ಸಿಎಂ ಭೇಟಿ ಮಾಡಿ ನಂತರ ರಾಜೀನಾಮೆ ಸಲ್ಲಿಸುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ. ಈ ಪ್ರಕರಣದಿಂದ ಹೊರ ಬಂದೇ ಬರುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ನನ್ನಿಂದ ಒಂದೇ ಒಂದು ತಪ್ಪಿದ್ರೆ ಆ ಭಗವಂತನಲ್ಲಿ ನಾನೇ ಶಿಕ್ಷೆ ಕೊಡು ಎಂದು ಕೇಳಿಕೊಳ್ಳುತ್ತೇನೆ. ನಾನು ನಮ್ಮ ಇಲಾಖೆಯನ್ನು ಯಶಸ್ವಿಯಾಗಿ ತೆಗೆದುಕೊಂಡು ಹೋಗುತ್ತಿದ್ದೆ. ಅದರಲ್ಲೂ ಮನೆಮನೆಗೆ ಗಂಗೆ ಎಂಬ ಕಾರ್ಯಕ್ರಮ ಯಶಸ್ವಿಯಾಗಿದೆ. ಇದಕ್ಕೆಲ್ಲಾ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.ರಾಜೀನಾಮೆ ಬಗ್ಗೆ ಎರಡು ದಿನಗಳ ಹಿಂದೆಯೇ   ತೀರ್ಮಾನ ಮಾಡಿದ್ದೆ. ಇದರಿಂದ ಸರ್ಕಾರಕ್ಕೆ ಇರುಸುಮುರುಸು ಆಗಬಾರದು ಎಂದು ಈ ತೀರ್ಮಾನಕ್ಕೆ ಬಂದೆ ಎಂದಿರುವ ಅವರು, ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಬಲಿಪಶು ಆಗುವವನಲ್ಲ. ದೇವರನ್ನು ನಂಬಿದ್ದೇನೆ, ತನಿಖೆ ಆಗಲಿ, ತನಿಖೆ ಆದ ನಂತರ ಅದರಿಂದ ಹೊರಬರುವೆ ಎಂದು ಹೇಳಿದರು.

error: Content is protected !!