ರಾಮರಾಜ್ಯದ ಕನಸು ನನಸಾಗಲಿ: ಸಚಿವ ಕೆ. ಎಸ್. ಈಶ್ವರಪ್ಪ: ಕನ್ಯಾಡಿ ರಾಮ ಕ್ಷೇತ್ರದಲ್ಲಿ ರಾಮನಾಮ ಸಪ್ತಾಹಕ್ಕೆ ಚಾಲನೆ:

 

 

 

ಬೆಳ್ತಂಗಡಿ: ಶ್ರೀ ರಾಮಕ್ಷೇತ್ರ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 62 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಹಾಗೂ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವಕ್ಕೆ ಎ 3 ಆದಿತ್ಯವಾರ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕರ್ನಾಟಕ ಸರಕಾರದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.  ನಂತರ  ಮಾತನಾಡಿದ ಅವರು ರಾಮನಾಮ ಸ್ಮರಣೆಯೊಂದಿಗೆ ನಮ್ಮ ಬದುಕಿನಲ್ಲಿ ರಾಮನ ಆದರ್ಶ ಜೀವನದ ತತ್ವಗಳನ್ನು ಅನುಷ್ಠಾನಗೊಳಿಸಿ ಸಮಸ್ಯೆಗಳೆಲ್ಲ ಪರಿಹಾರವಾಗಿ ಶಾಂತಿ, ನೆಮ್ಮದಿ ನೆಲೆಸಲಿ. ಭಕ್ತರ ದೃಢ ಸಂಕಲ್ಪದೊಂದಿಗೆ ರಾಮರಾಜ್ಯದ ಕನಸು ನನಸಾಗಲಿ.

 

ರಾಮನ ಸಾರ್ಥಕ ಜೀವನದಲ್ಲಿ ಸತ್ಯ, ಧರ್ಮ, ನ್ಯಾಯ ನೀತಿಯ ಪರಿಪಾಲನೆ ಆದರ್ಶ ಹಾಗೂ ಅನುಕರಣೀಯವಾಗಿದೆ. ರಾಮನಾಮ ಸ್ಮರಣೆಯೊಂದಿಗೆ ಭಯ, ಭೀತಿ, ಆತಂಕ ನಿವಾರಣೆಯಾಗಿ ಎಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸೌಹಾರ್ದಯುತ ಜೀವನ ನಡೆಸುವಂತಾಗಲಿ ಎಂದು ಅವರು ಹಾರೈಸಿದರು. ಈ ಸಂದರ್ಭದಲ್ಲಿ ದ.ಕ.ಸಂಸದ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಬೆಳ್ತಂಗಡಿ ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಲ್ಲವರ ಮಹಾ ಮಂಡಲ ಉಪಾಧ್ಯಕ್ಷ ಪೀತಾಂಬರ ಹೇರಾಜೆ,ಧರ್ಮಸ್ಥಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಆರಂಬೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಾ ರಮೇಶ್, ಜಿ. ಪಂ.ಮಾಜಿ ಸದಸ್ಯ ಶೈಲೇಶ್ ಕುಮಾರ್ ಕೆ, ತುಂಗಪ್ಪ ಬಂಗೇರ, ಶ್ರೀರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ,ಸಂಚಾಲಕ ಜಯಂತ ಕೋಟ್ಯಾನ್ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ನಿಡ್ಗಲ್,ಕಾರ್ಯದರ್ಶಿ ಚಿದಾನಂದ ಇಡ್ಯಾ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ರಾಜು ನಾಯ್ಕ್,ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ಪ್ರಮುಖರಾದ ವಕೀಲ ಭಗೀರಥ ಜಿ,ರಾಜೇಶ್ ಮೂಡುಕೋಡಿ, ರತ್ನಾಕರ ಬಣ್ಣನ್, ಪ್ರಶಾಂತ್ ಪಾರೆಂಕಿ, ವಕೀಲ ಅನಿಲ್ ಯು, ಕೇಶವ ಗೌಡ ಪಿ,ಟ್ರಸ್ಟಿ ತುಕಾರಾಮ್ ಸಾಲಿಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರುಗಳಾದ ವಸಂತ ಪೂಜಾರಿ ಪುದುವೆಟ್ಟು, ಪುರುಷೋತ್ತಮ ಧರ್ಮಸ್ಥಳ,ಗಣೇಶ್ ಗೌಡ,ಗುರುಪ್ರಸಾದ ಕೋಟ್ಯಾನ್ ಉಜಿರೆ, ಉಪನ್ಯಾಸಕ ಸ್ಮಿತೇಶ್ ಬಾರ್ಯ,ಕೃಷ್ಣಪ್ಪ ಗುಡಿಗಾರ,ಪ್ರೀತಮ್ ಡಿ., ಶಶಿಧರ್ ನಿಡ್ಗಲ್ ಧನಲಕ್ಷ್ಮೀ ಜನಾರ್ದನ, ಸೀತಾರಾಮ ಬೆಳಾಲು,ಭಾಸ್ಕರ ಧರ್ಮಸ್ಥಳ, ಶಶಿಧರ ಕಲ್ಮಂಜ,ಇನ್ನಿತರರು ವಿವಿಧ ಭಜನಾ ಮಂಡಳಿಯ ಸದಸ್ಯರು,
ರಾಮಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಕ್ತರು ಹಾಜರಿದ್ದರು. ಎ.10 ರ ವರೆಗೆ 7 ದಿನಗಳಲ್ಲಿ ಅಹೋರಾತ್ರಿ ಭಜನೆ,ಉತ್ಸವ, ಬ್ರಹ್ಮ ರಥೋತ್ಸವ ನಡೆಯಲಿದೆ.

error: Content is protected !!