ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಘೋಷಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಸಚಿವ ಡಾ.ನಾರಾಯಣಗೌಡ ಪ್ರಶಸ್ತಿ ಘೋಷಣೆಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು.
ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತರು :
ಜೀವನ್ ಕೆ.ಎಸ್- ಅಥ್ಲೆಟಿಕ್ಸ್
ನಿತಿನ್- ನೆಟ್ಬಾಲ್
ಅಶ್ವಿನಿ ಭಟ್- ಬ್ಯಾಡ್ಮಿಂಟನ್.
ತರುಣ್ ಕೃಷ್ಣಪ್ರಸಾದ್ ರೋಯಿಂಗ್
ಲೋಪಮುದ್ರಾ ತಿಮ್ಮಯ್ಯ- ಬಾಸ್ಕೆಟ್ ಬಾಲ್
ಲಿಖಿತ್ ಎಸ್.ಪಿ-ಈಜು.
ಕರಣ್ ನಾಯರ್ -ಕ್ರಿಕೆಟ್.
ಅನರ್ಘ್ಯ ಮಂಜುನಾಥ್-ಟೇಬಲ್ ಟೆನ್ನಿಸ್
ದಾನಮ್ಮ ಚಿಚಖಂಡಿ-ಸೈಕ್ಲಿಂಗ್
ಅಶ್ವಲ್ ರೈ – ವಾಲಿಬಾಲ್
ವಸುಂಧರಾ ಎಂ.ಎನ್.-ಜುಡೋ
ಪ್ರಧಾನ್ ಸೋಮಣ್ಣ-ಹಾಕಿ
ಪ್ರಶಾಂತ್ ಕುಮಾರ್ ರೈ-ಕಬಡ್ಡಿ
ರಾಧಾ .ವಿ-ಪ್ಯಾರಾ ಅಥ್ಲೆಟಿಕ್ಸ್
ಮುನೀರ್ ಬಾಷಾ-ಖೋ-ಖೋ
ಜೀವಮಾನ ಸಾಧನಾ ಪ್ರಶಸ್ತಿ:
ಗಾವಂಕರ್ ಜಿ.ವಿ.-ಅಥ್ಲೆಟಿಕ್ಸ್ಕ್ಯಾಪ್ಟನ್ ದಿಲೀಪ್ ಕುಮಾರ್ -ಕಯಾಕಿಂಗ್ & ಕನೋಯಿಂಗ್
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ :
ಪೂಜಾಗಾಲಿ-ಆಟ್ಯಾ-ಪಾಟ್ಯಾ
ಬಿ.ಎನ್. ಕಿರಣ್ ಕುಮಾರ್-ಬಾಲ್ ಬ್ಯಾಡ್ಮಿಂಟನ್.
ಗೋಪಾಲನಾಯ್ಕ್-ಕಂಬಳ
ದೀಕ್ಷಾಕೆ-ಖೋ-ಖೋ
ಶಿವಯೋಗಿ ಬಸಪ್ಪ ಬಾಗೇವಾಡಿ-ಗುಂಡುಕಲ್ಲು ಎತ್ತುವುದು
ಲಕ್ಷ್ಮೀ ಬಿರೆಡೆಕರ್-ಕುಸ್ತಿ
ಪಿ.ಗೋಪಾಲಕೃಷ್ಣ -ಯೋಗ
ರಾಘವೇಂದ್ರ.ಎಸ್. ಹೊಂಡದಕೇರಿ- ಪವರ್ ಲಿಫ್ಟಿಂಗ್
ಸಿದ್ದಪ್ಪ ಪಾಂಡಪ್ಪ ಹೊಸಮನಿ- ಸಂಗ್ರಾಣಿಕಲ್ಲು ಎತ್ತುವುದು
ಸೂರಜ್ ಎಸ್ ಅಣ್ಣಿಕೇರಿ- ಕುಸ್ತಿ
ಶಶಾಂಕ್ಬಿ.ಎಂ- ಪ್ಯಾರಾ ಈಜು
ಡಿ.ನಾಗಾರಾಜು -ಯೋಗ
ಶ್ರೀವರ್ಷಿಣಿ -ಜಿಮ್ನಾಸ್ಟಿಕ್
ಅವಿನಾಶ್ವಿನಾಯ್ಕ- ಜುಡೋ
ಕ್ರೀಡಾ ಪೋಷಕ ಪ್ರಶಸ್ತಿ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್ ಉಜಿರೆ- ದಕ್ಷಿಣಕನ್ನಡ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ- ಬೆಂಗಳೂರು ನಗರ ಜಿಲ್ಲೆ
ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ-ಬೆಂಗಳೂರು ನಗರ ಜಿಲ್ಲೆ
ಹೂಡಿ ಸ್ಪೋರ್ಟ್ಸ್ ಕ್ಲಬ್- ಬೆಂಗಳೂರು ನಗರ ಜಿಲ್ಲೆ
ಶ್ರೀ ಬಾಲಮಾರುತಿ ಸಂಸ್ಥೆ-ಧಾರವಾಡ
ಎಮಿನೆಂಟ್ ಶೂಟಿಂಗ್ ಹಬ್-ಬೆಂಗಳೂರು ನಗರ ಜಿಲ್ಲೆ
ಬಾಲಾಂಜನೇಯ ಜಿಮ್ನಾಸಿಯಂ (ರಿ.) ಮಂಗಳೂರು
ಬಸವನಗುಡಿ ಅಕ್ವಾಟಿಕ್ ಸೆಂಟರ್ – ಬೆಂಗಳೂರು ಜಿಲ್ಲೆ
ದ್ರಾವಿಡ್ ಪಡಕೋಣೆ ಅಕಾಡೆಮಿ-ಬೆಂಗಳೂರು ನಗರ ಜಿಲ್ಲೆ
ಪಿಪಲ್ ಎಜುಕೇಷನಲ್ ಟ್ರಸ್ಟ್-ಮಂಡ್ಯ
ಏಕಲವ್ಯ ಪ್ರಶಸ್ತಿ: .ಕ್ರೀಡಾ
ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ1992 ರಿಂದ ಪ್ರಶಸ್ತಿ ನೀಡಲಾಗುತ್ತಿದೆ. ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ, 2 ಲಕ್ಷ ನಗದು ಬಹುಮಾನ.
ಜೀವಮಾನ ಸಾಧನೆ ಪ್ರಶಸ್ತಿ : ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ನಗದು ಬಹುಮಾನ.ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ : 2014 ರಿಂದ ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ರೂ.ನಗದು ಪುರಸ್ಕಾರ.
ಕ್ರೀಡಾ ಪೋಷಕ ಪ್ರಶಸ್ತಿ : ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪ್ರವರ್ತಕರನ್ನು ಗುರುತಿಸಿ 2017-18 ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ಪತ್ರ ಮತ್ತು 5 ಲಕ್ಷ ನಗದು ಪುರಸ್ಕಾರ.