ನಾಪತ್ತೆಯಾಗಿದ್ದ ಪೌರ ಕಾರ್ಮಿಕನ ‌ನಿಗೂಢ ಸಾವು: ಬೆಳ್ತಂಗಡಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಪೊಲೀಸರಿಂದ ಪರಿಶೀಲನೆ, ಶವಾಗಾರದಲ್ಲಿ ಮೃತದೇಹ

 

 

 

 

ಬೆಳ್ತಂಗಡಿ: ಜ.7ರಿಂದ ನಾಪತ್ತೆಯಾಗಿದ್ದ ಪೌರಕಾರ್ಮಿಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ನಗರದ ಮಾರಿಗುಡಿ‌ ದೇವಸ್ಥಾನದ ಪಕ್ಕದಲ್ಲಿರುವ ಸರಕಾರಿ ಮೈದಾನದಲ್ಲಿ ನಡೆದಿದೆ‌.

ಬೆಳ್ತಂಗಡಿ ಪೌರಕಾರ್ಮಿಕ ಲಿಂಗಶೆಟ್ಟಿ(43) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಸರಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವ ಬೆಳ್ತಂಗಡಿ ಸರಕಾರಿ ಶವಾಗಾರಕ್ಕೆ ಸಾಗಿಸಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಜನವರಿ 7ರಿಂದಲೇ ಕಾರ್ಮಿಕ ನಾಪತ್ತೆಯಾಗಿದ್ದರೂ, ಈ ಕುರಿತು ಯಾವುದೇ ದೂರು ದಾಖಲಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

error: Content is protected !!