ಭಾರತದ ಧ್ವಜಕ್ಕೆ ಇಂದು ವಿದೇಶದೆಲ್ಲೆಡೆ ಗೌರವ ಸಿಗುತ್ತಿದೆ: ಹರಿಕೃಷ್ಣ ಬಂಟ್ವಾಳ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವಿಶೇಷ ಕಾರ್ಯಕಾರಿಣಿ

 

 

ಬೆಳ್ತಂಗಡಿ: ನಮ್ಮ ದೇಶದ ಸಂವಿಧಾನದಲ್ಲಿ‌ ಜಾತ್ಯಾತೀತತೆ ಎಂಬ ಪದವೇ ಎಲ್ಲೂ ನಮೂದಿಸಲಾಗಿಲ್ಲ. ಆದರೆ ನಕಲಿ ಜಾತ್ಯಾತೀತತೆಯಿಂದ ದೇಶದಲ್ಲಿ ಸಮಸ್ಯೆಗೆ ಕಾರಣವಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಅವರು ಮಂಗಳವಾರ ಲಾಯಿಲಾ ಸ್ಥಾನಿಕ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ವಿಶ್ವದಲ್ಲಿ ಭಾರತಕ್ಕೆ ಗೌರವ ಕಡಿಮೆಯಿತ್ತು. ಆದರೆ ನರೇಂದ್ರ ಮೋದಿಯವರ ಆಡಳಿತದಿಂದ ಇಂದು ಭಾರತದ ಧ್ವಜಕ್ಕೆ ವಿದೇಶದೆಲ್ಲೆಡೆ ಗೌರವ ಸಿಗುವಂತಾಗಿದೆ. ಇದು ಬದಲಾದ ಭಾರತದ ಆಡಳಿತ ಎಂದು ಬಣ್ಣಿಸಿದ ಅವರು, ಹಿಜಬ್ ಬಗ್ಗೆ ಸಂವಿಧಾನದಲ್ಲಿ ಯಾವೂದೇ ಪ್ರಸ್ತಾಪವಿಲ್ಲ. ಆದರೆ ಕರ್ನಾಟಕದಲ್ಲಿ ನಡೆದ ಹಿಜಬ್ ಪ್ರಕರಣಕ್ಕೆ ಕಾಂಗ್ರೇಸ್ ಮತ್ತು ಎಸ್. ಡಿ.ಪಿ.ಐ. ಕಾರಣವಾಗಿದೆ ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ ಗೌಡ ನಾವೂರು ಇದ್ದರು.
ಮಂಡಲ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಸ್ವಾಗತಿಸಿದರು. ಉಪಾಧ್ಯಕ್ಷೆ ವಸಂತಿ ಮಚ್ಚಿನ ವಂದಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

error: Content is protected !!