ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಕನ್ಯಾಡಿ ಮಹಾ ಬ್ರಹ್ಮ ರಥೋತ್ಸವ 62 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಎ 03 ರಿಂದ 10 ರವರೆಗೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು

 

ಬೆಳ್ತಂಗಡಿ : ದಕ್ಷಿಣ ಅಯೋಧ್ಯೆ ಎಂದೇ ಕರೆಯಲ್ಪಡುವ ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 62ನೇ ವರ್ಷದ ಶ್ರೀರಾಮತಾರಕ ಮಂತ್ರ-ಸಪ್ತಾಹ ಸಮಾರಂಭ ಹಾಗೂ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವವು ಜಗದ್ಗುರು ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಸ್ಮರಣೆಯೊಂದಿಗೆ, ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.03ರಿಂದ ಎ.10ರವರೆಗೆ ನಡೆಯಲಿದೆ ಎಂದು ಕನ್ಯಾಡಿ ನಿತ್ಯಾನಂದ ನಗರ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್‌ನ ಪೀಠಾಧೀಶ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎ.03ರಂದು ಶ್ರೀರಾಮನಾಮ ಸಪ್ತಾಹದ ನಂದಾದೀಪವನ್ನು ಇಂಧನ, ಕನ್ನಡ ಮತ್ತು ಸಾಂಸ್ಕೃತಿಕ ಸಚಿವ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಉದ್ಘಾಟಿಸಲಿದ್ದು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್, ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕ ಕೆ. ವಸಂತ ಬಂಗೇರ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಶ್ರೀ ರಾಮ ಜಯರಾಮ ಜಯ ಜಯ ರಾಮ ನಾಮೋಚ್ಚಾರಣೆಯನ್ನು ಪ್ರಾರಂಭಿಸಲಿದ್ದಾರೆ. ಹಾಗೂ ರಾಜ್ಯದ ಸಚಿವರುಗಳು, ಮಾಜಿ ಸಚಿವರುಗಳು, ಶಾಸಕರುಗಳು, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಎ.03ರಂದು ಶ್ರೀ ಸಿದ್ಧಿವಿನಾಯಕ ಮತ್ತು ಕ್ಷೇತ್ರಪಾಲ ಗಣಪತಿ ದೇವರ ಬಲಿ ಉತ್ಸವ, ಸಂಜೆ 06ರಿಂದ ದೇವದಾಸ್ ಕಾಪಿಕಾಡ್ ನೇತೃತ್ವದ ಚಾಪರ‍್ಕ ಕಲಾವಿದರಿಂದ ಕುರೆಪಟ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಎ.04ರಂದು ರಾತ್ರಿ 8ರಿಂದ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರ್ಡಿ ಸಾಯಿ ಬಾಬ ಗುರುಗಳ ಉತ್ಸವಮೂರ್ತಿಯ ಬಲಿ ಉತ್ಸವ, ಸಂಜೆ 06ರಿಂದ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಎ.05ರಂದು ಸಂಜೆ 06ರಿಂದ ಕೋಟಿ ಚೆನ್ನಯ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು ರಾತ್ರಿ 8ಕ್ಕೆ ಶ್ರೀರಾಮ ದೇವರ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಎ.06ರಂದು ಸಂಜೆ 6ರಿಂದ ಕಲಾಸಂಗಮ ಅರ್ಪಿಸುವ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದ್ದು ರಾತ್ರಿ 8ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ, ಪುಷ್ಪ ರಥೋತ್ಸವ ನಡೆಯಲಿದೆ. ಎ.07ರಂದು ಸಂಜೆ 6ರಿಂದ ನೃತ್ಯ ನಿಕೇತನ ಕೊಡವೂರು ಕಲಾವಿದರಿಂದ ನೃತ್ಯ ಸಿಂಚನ, ರಾತ್ರಿ 8ಕ್ಕೆ ಶ್ರೀದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರ ಮಂಡಲ ರಥೋತ್ಸವ ನಡೆಯಲಿದೆ. ಎ.08ರಂದು ಸಂಜೆ 6ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ -ಸಾಹಿತ್ಯ -ಸಂಭ್ರಮ, ರಾತ್ರಿ 8ಕ್ಕೆ ಶ್ರೀ ಗೋಪಾಲಕೃಷ್ಣ ದೇವರ ಬಲಿ ಉತ್ಸವ, ಬೆಳ್ಳಿ ರಥೋತ್ಸವ ನಡೆಯಲಿದೆ. ಎ.09ರಂದು ಸಂಜೆ 6ರಿಂದ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ಮಸ್ತ್ ಮ್ಯಾಜಿಕ್, ರಾತ್ರಿ 8ಕ್ಕೆ ಶ್ರೀ ದತ್ತಾತ್ರೇಯ ಮೂರ್ತಿ ಮತ್ತು ಅಂಜನೇಯ ದೇವರ ಮೂರ್ತಿ ಬಲಿ ಉತ್ಸವ, ಶ್ರೀ ಹನುಮಾನ್ ರಥೋತ್ಸವ ನಡೆಯಲಿದೆ. ಎ.10ರಂದು ಬೆಳಿಗ್ಗೆ 9.30ಕ್ಕೆ ಶ್ರೀರಾಮ ತಾರಕ ಮಂತ್ರ ಯಜ್ಞ ಮಂಗಳ, ಮಧ್ಯಾಹ್ನ ಶ್ರೀದೇವರ ಪಲ್ಲಕ್ಕಿ ಬಲಿ ಉತ್ಸವ, ಅಪರಾಹ್ನ 3ರಿಂದ ಚಂದ್ರಾವಳಿ ವಿಲಾಸ ಯಕ್ಷಗಾನ, ರಾತ್ರಿ 7ರಿಂದ ಕ್ಷೇತ್ರದ ರಕ್ತೇಶ್ವರಿ, ಗುಳಿಗ ದೈವಗಳ ನೇಮೋತ್ಸವ, ರಾತ್ರಿ 10ಕ್ಕೆ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ. ಎ.12ರಂದು ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ರಾತ್ರಿ 8ರಿಂದ ಸನ್ಯಾಸಿ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ ಹಾಗೂ ಪ್ರತೀದಿನ ಅಹೋರಾತ್ರಿ ಶ್ರೀರಾಮ ತಾರಕ ಮಂತ್ರ ಭಜನೆ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಶ್ರೀರಾಮಕ್ಷೇತ್ರ ಸೇವಾ ಸಮಿತಿ ಪ್ರಧಾನ ಸಂಚಾಲಕ ಜಯಂತ್ ಕೋಟ್ಯಾನ್, ಶ್ರೀರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಟ್ರಸ್ಟಿಗಳಾದ ತುಕಾರಾಮ, ಕೃಷ್ಣಪ್ಪ ಗುಡಿಗಾರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಮೂಡುಕೋಡಿ, ಸಾಂಸ್ಕೃತಿ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ಸ್ಮಿತೇಶ್ ಬಾರ್ಯ, ಮೋನಪ್ಪ ದೇವಸ್ಯ, ಉಪಸ್ಥಿತರಿದ್ದರು.

error: Content is protected !!