ದಾನಿಗಳ ಸಹಕಾರದಲ್ಲಿ ಹೊಸ ಸ್ವಚ್ಛತಾ ವಾಹನ ಖರೀದಿ ಶ್ಲಾಘನೀಯ ಲಾಯಿಲ ಗ್ರಾಮ ಪಂಚಾಯತ್ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜ

 

 

 

ಬೆಳ್ತಂಗಡಿ: ಸರ್ಕಾರದ ಚಿಂತನೆಯಂತೆ ಸಂಜೀವಿನಿ ಒಕ್ಕೂಟಕ್ಕೆ ಶಕ್ತಿಯನ್ನು ಕೊಟ್ಟಂತಹ ಸಂದರ್ಭದಲ್ಲಿ ಮಹಿಳೆಯರು ಸೇರಿಕೊಂಡು ಏನಾದರೊಂದು ಪರಿವರ್ತನೆ ಮಾಡಬಹುದು ಎಂಬುವುದನ್ನು ಲಾಯಿಲ ಸಮಗ್ರ ಸಂಜೀವಿನಿ ಒಕ್ಕೂಟದವರು ತೋರಿಸಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ. ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ , ಸ್ವಚ್ಛತಾ ವಾಹನದ ಲೋಕಾರ್ಪಣೆ, ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ , ಎನ್ ಆರ್. ಎಲ್, ಎಮ್ ಕಟ್ಟಡ ಉದ್ಘಾಟನೆ, ಸಮಗ್ರ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಸಂಜೀವಿನಿ ಒಕ್ಕೂಟಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ ಅದಲ್ಲದೇ ಸರ್ಕಾರದಿಂದ ಏನಾದರೂ ಯೋಜನೆಗಳಿದ್ದರೂ ಸಂಪೂರ್ಣ ಸಹಕಾರ ನೀಡಲಾಗುವುದು .

 

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ಸಮಗ್ರ ಗ್ರಾಮೀಣಾಭಿವೃದ್ಧಿ ಎಂಬ ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಈಗಿನ ವ್ಯವಸ್ಥೆಗೆ ಅದು ಭಗವದ್ಗಿತೆ ಇದ್ದಂತೆ ಈ ನಿಟ್ಟಿನಲ್ಲಿ ಸಮಗ್ರವಾದ ವಿವರಗಳ ಕೈಗನ್ನಡಿಯನ್ನು ಪುಸ್ತಕ ರೂಪದಲ್ಲಿ ಹೊರತಂದ್ದ ಅವರಿಗೆ ಅಭಿನಂದನೆಗಳು ಅವರು ಬೆಳ್ತಂಗಡಿ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದು ಈಗಾಗಲೇ ಮೂರು ಗ್ರಂಥಾಲಯ ರಚನೆಗೆ ಸಹಕಾರ ನೀಡಿದ್ದಾರೆ. ಗ್ರಾಮದ ಸ್ಚಚ್ಚತೆಯ ನಿಟ್ಟಿನಲ್ಲಿ ದಾನಿಗಳ ಸಹಕಾರದ ಮೂಲಕ ಹೊಸ ಸ್ಚಚ್ಚತಾ ವಾಹನವನ್ನು ಖರೀದಿಸಿ ಲಾಯಿಲ ಪಂಚಾಯತ್ ಲೋಕಾರ್ಪಣೆ ಮಾಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ.

 

 

ಬಹುವರುಷಗಳ ಜನರ ಬೇಡಿಕೆಯಾಗಿದ್ದ ಪುಂಜಾಲಕಟ್ಟೆ ಗುರುವಾಯನಕೆರೆ ರಸ್ತೆ ಅಗಲೀಕರಣ ಮಾಡಬೇಕು ಈ ರಸ್ತೆ ಯಾವಾಗ ಅಗಲೀಕರಣಗೊಳ್ಳುತ್ತದೆ ಎಂಬ ಕುತೂಹಲ ಹಲವರಲ್ಲಿ ಇತ್ತು ಈಗ ರಸ್ತೆ ಅಭಿವೃದ್ಧಿಗಾಗಿ 718 ಕೋಟಿ ರೂಪಾಯಿ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಮುತುವರ್ಜಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ನಿತೀನ್ ಗಡ್ಕರಿಯವರ ಮೂಲಕ ಮಂಜೂರಾಗಿದ್ದು ಇದರಿಂದ ಗುರುವಾಯನಕೆರೆ ಬೆಳ್ತಂಗಡಿ ಉಜಿರೆ ಚತುಷ್ಪಥ ರಸ್ತೆ ನಿರ್ಮಾಣಗೊಂಡು ಬೆಳ್ತಂಗಡಿಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಈ ಮೂಲಕ ನವ ಬೆಳ್ತಂಗಡಿ ನಿರ್ಮಾಣದ ಕಲ್ಪನೆ ಸಾಕಾರಗೊಂಡು ಜನರ ಬಹುದಿನಗಳ ಕನಸು ನನಸಾಗುತ್ತಿದೆ ಎಂದರು.

 

 

 

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ ರಾಜ್ಯಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಗ್ರಂಥಾಲಯವೊಂದು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿದ್ದು  ಬೆಳ್ತಂಗಡಿ ಶಾಸಕರು ಶಿಕ್ಷಣದ ಹಾಗೂ ಜ್ಞಾನದ ಕ್ಷೇತ್ರಕ್ಕೆ ಬಹಳ ಒತ್ತನ್ನು ನೀಡುತ್ತಿರುವುದರಿಂದ
ಮೂರು ಗ್ರಂಥಾಲಯವನ್ನು 5 ಲಕ್ಷ ರೂ ಅನುದಾನದಲ್ಲಿ ಬೆಳ್ತಂಗಡಿಯ ಮೂರು ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾಗುತಿದ್ದು ಲಾಯಿಲದಲ್ಲಿ ಶಿಲಾನ್ಯಾಸ ಶಾಸಕರ ಮೂಲಕ ಮಾಡಲಾಗಿದೆ.ಯುವ ಮನಸ್ಸು ಸದಾ ಅಭಿವೃದ್ಧಿ ಪರ ಚಿಂತನೆಯಲ್ಲಿರುವ ಶಾಸಕರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ.

 

 

ಅಭಿವೃದ್ಧಿ ಹಾಗೂ ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಲಾಯಿಲ ಗ್ರಾಮ ಪಂಚಾಯಿತಿ ಮೊದಲಿನಿಂದಲೂ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಬಂದಿದೆ.ಪಂಚಾಯತ್ ಸಮರ್ಪಕವಾಗಿ ಅಭಿವೃದ್ಧಿ ಹೊಂದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಉತ್ತಮ ಸಾಮರಸ್ಯ ಇರಬೇಕು.

 

 

 

ಸ್ನೇಹ ಸಮಗ್ರ ಸಂಜೀವಿನಿ ಒಕ್ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನ ಮಂತ್ರಿ ಕಿರು ಆಹಾರ ಯೋಜನೆ ಲಾಯಿಲದ ಸಮಗ್ರ ಸಂಜೀವಿನಿ ಸದಸ್ಯರು ಪ್ರಾರಂಭಿಸುತ್ತಿದ್ದಾರೆ .ಅದ್ದರಿಂದ ಇನ್ನಷ್ಟೂ ಮಹಿಳಾ ಒಕ್ಕೂಟಗಳಿಗೆ ಮಾಹಿತಿಯನ್ನು ನೀಡಬೇಕು ಎಂದರು.

 

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕ್ರತ  ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ ಅವರನ್ನು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.  ಕುಮಾರ್ ಅವರನ್ನು ಶಾಸಕರ ಮೂಲಕ ಪಂಚಾಯತ್ ವತಿಯಿಂದ ಗೌರವಿಸಲಾಯಿತು.ಮತ್ತು ಸ್ವಚ್ಛತಾ ವಾಹನಕ್ಕೆ ನೆರವು ನೀಡಿದವರನ್ನು ಗುರುತಿಸಲಾಯಿತು ಪಂಚಾಯತ್ ಅಧ್ಯಕ್ಷೆ ಬೆನಡಿಕ್ಟ ಸಲ್ದಾನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗಣೇಶ್ ಆರ್. ಸ್ವಾಗತಿಸಿದರು ಸದಸ್ಯ ಅರವಿಂದ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು ಕಾರ್ಯದರ್ಶಿ ಯಶೋದರ ಶೆಟ್ಟಿ ಧನ್ಯವಾದವಿತ್ತರು.
ತಾಲೂಕು ಪಂಚಾಯತ್ ಕಾರ್ಯಕ್ರಮ ಸಂಯೋಜಕ ಜಯಾನಂದ ಲಾಯಿಲ
ನಿರೂಪಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸಮಾಧರ್, ಎನ್ ಆರ್ ಎಲ್ ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಯಶೋದ ರಾಘವೇಂದ್ರ ನಗರ,   ಗ್ರಾಮ ಪಂಚಾಯತ್ ಸದಸ್ಯರುಗಳು ಪಂಚಾಯತ್ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!